
ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆಯುವ 41ನೇ ವರ್ಷದ ಜೇಸಿ ಸಪ್ತಾಹ ‘ಡೈಮಂಡ್-2024’ ಅಂಗವಾಗಿ ಸೆ.9ರಂದು ಸಂಜೆ ಕೊಪ್ಪ ಪ್ರಶಾಂತ ನಿವಾಸ ಆಶ್ರಮ ಭೇಟಿ ಕಾರ್ಯಕ್ರಮ ನಡೆಯಿತು.
ಆಶ್ರಮವಾಸಿಗಳಿಗೆ ಯೋಗ ಪ್ರಾತ್ಯಕ್ಷಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಣ್ಣುಹಂಪಲು ವಿತರಣೆ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷರಾದ ಆರ್.ವೆಂಕಟ್ರಮಣ, ಜನಾರ್ದನ ಟಿ., ಅವರು ಯೋಗದ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಜೇಸಿಐ ಸದಸ್ಯರು ಹಾಗೂ ಆಶ್ರಮವಾಸಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಗಣೇಶ್ ಕೆ.ರಶ್ಮಿ ಆತಿಥ್ಯ ನೀಡಿದರು.ಕೊಪ್ಪ ಪ್ರಶಾಂತ ನಿವಾಸ ಆಶ್ರಮದ ಸಿ.ತೆರೆಜಾ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು ಜೇಸಿಐ ಕಾರ್ಯದರ್ಶಿ ಆನಂದ ಅಜಿಲ ವಂದಿಸಿದರು.
ಗೌರವಾರ್ಪಣೆ:
ಆಶಾ ಕಾರ್ಯಕರ್ತೆ ವಿಜಯ ತುಕರಾಮ ರೈ ದಂಪತಿಗಳನ್ನು, ರತ್ನಾಕರ ಬಂಟ್ರಿಯಾಲ್, ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.





