ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ಶೇ.14 ಡಿವಿಡೆಂಡ್, ರೂ.1.16 ಕೋಟಿ ಲಾಭ

ಶೇರ್ ಮಾಡಿ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.12ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ.ಪಿ. ಅವರು ಸಂಘವು 31.40ಕೋಟಿ ಠೇವಣಿ ಹೊಂದಿದ್ದು, ರೂ.38.30ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ.98%ರಷ್ಟು ವಸೂಲಾತಿ ಆಗಿರುತ್ತದೆ. ವಾರ್ಷಿಕ ರೂ.214.90ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂ.1,16,15,869.66 ಲಾಭ ಗಳಿಸಿ ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಪಡೆದುಕೊಂಡಿದ್ದು, ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಶಾಲಪ್ಪ ಗೌಡ.ಪಿ. ಅವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಈಶ್ವರ ಭಟ್, ನಿರ್ದೇಶಕರಾದ ಜಾರಪ್ಪ ಗೌಡ ಎಸ್‌., ಮಹಾಬಲ ಶೆಟ್ಟಿ, ಪದ್ಮನಾಭ ಗೌಡ, ವಿಶ್ವನಾಥ.ಕೆ., ವಿಠಲ ಭಂಡಾರಿ, ಪ್ರೇಮಾವತಿ, ವೇದಾವತಿ, ವಿಶ್ವನಾಥ.ಎಂ.ಕೆ, ಕೇಶವ.ಕೆ., ಮೋನಪ್ಪ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾ‌ರ್.ಕೆ ಉಪಸ್ಥಿತರಿದ್ದರು.

ಸಹನಾ, ಚೈತನ್ಯ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ.ಪಿ ಸ್ವಾಗತಿಸಿದರು. ಗುಮಾಸ್ತ ಸುಂದರ ಗೌಡ.ಕೆ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಸಂಘದ ವ್ಯಾಪ್ತಿಯ ಹಿರಿಯ ಸದಸ್ಯರು ಮತ್ತು ಸಾಧಕರಗಳಾದ ಅಣ್ಣು ಗೌಡ ಪುತ್ಯೆಮಜಲು, ರುಕ್ಮಯ ಗೌಡ ಪೂವಾಜೆ, ನಾಚ ನಾಯ್ಕ ಕುವೆತ್ಯಾರು, ಎಲ್ಯಕ್ಕ ಹೆಂಗ್ಸು ಕೆಂಗುಡೇಲು, ಮಗ್ಗಿ ಶಬರಾಡಿ, ಆದಂ ಬ್ಯಾರಿ ಬೋಳದ ಬೈಲು ಹಾಗೂ ತರಕಾರಿ ಕೃಷಿಯಲ್ಲಿ ಸಾಧನೆ ಮಾಡಿದ ನೀಲಯ್ಯ ಪಟ್ರಮೆ, ಕರಾಟೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಚಿರಾಯು ಗಾನಗಿರಿ, 2023-24ನೇ ಸಾಲಿನಲ್ಲಿ ಸಂಘದಿಂದ ಅತಿ ಹೆಚ್ಚು ಗೊಬ್ಬರ ಖರೀದಿ ಮಾಡಿದ ನಿರಂಜನ್ ಜೈನ್ ಉಳಿಯಬೀಡು, ರಾಘವ.ಕೆ. ಕೊಲ್ಲಾಜೆ, ಕ್ಯಾಂಪ್ಕೋ ಸಹಯೋಗದೊಂದಿಗೆ ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ಸಂಘದ ಸದಸ್ಯ ಕೃಷ್ಣ ಭಟ್. ಕೆ ಹಿತ್ತಿಲು. ಸಂಘದ ವ್ಯಾಪ್ತಿಯಲ್ಲಿ ಬರುವ ಸುಮಾರು ವರ್ಷಗಳಿಂದ ಅಡಿಕೆ ಕೊಯ್ಲು ಮತ್ತು ಮದ್ದು ಸಿಂಪಡಣೆಯಲ್ಲಿ ನುರಿತ ವ್ಯಕ್ತಿಗಳನ್ನು ಗುರುತಿಸಲಾಯಿತು. ಉತ್ತಮ ಚಟುವಟಿಕೆಯಲ್ಲಿರುವ ನವೋದಯ ತಂಡಗಳನ್ನು ಗುರುತಿಸಿ ಇವರುಗಳನ್ನು ಸನ್ಮಾನಿಸಲಾಯಿತು

Leave a Reply

error: Content is protected !!