ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊಸಗದ್ದೆ ಶಾಲೆಗೆ ಸಮಗ್ರ ಪ್ರಶಸ್ತಿ

ಶೇರ್ ಮಾಡಿ

ನೆಲ್ಯಾಡಿ: ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೊಸಗದ್ದೆ ಶಾಲೆಗೆ ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಹಾಗೂ ಕಿರಿಯ ವಿಭಾಗದಲ್ಲಿ ತೃತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.

ಹಿರಿಯರ ವಿಭಾಗದಲ್ಲಿ ಅಭಿನಯಗೀತೆಯಲ್ಲಿ 7ನೇ ತರಗತಿಯ ಗಹನ ಪ್ರಥಮ, ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ 5ನೇ ತರಗತಿಯ ಫಾತಿಮತ್ ಆಶಿಮ ದ್ವಿತೀಯ, ಅರೇಬಿಕ್ ಪಠಣದಲ್ಲಿ 6ನೇ ತರಗತಿಯ ಮುಹಮ್ಮದ್ ಯಾಸೀನ್ ಪ್ರಥಮ, ಹಿಂದಿ ಕಂಠಪಾಠದಲ್ಲಿ 7ನೇ ತರಗತಿಯ ಕೌಶಿಕ ಪ್ರಥಮ, ಸಂಸ್ಕøತ ಪಠಣದಲ್ಲಿ 7ನೇ ತರಗತಿಯ ಧೃತಿ ಪ್ರಥಮ, ಮಿಮಿಕ್ರಿಯಲ್ಲಿ 6ನೇ ತರಗತಿಯ ತಶ್ವಿನ್ ದ್ವಿತೀಯ ಹಾಗೂ ಕ್ಲೇ ಮಾಡೆಲ್‍ನಲ್ಲಿ 6ನೇ ತರಗತಿಯ ಜಯಪ್ರೀತ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಕಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠದಲ್ಲಿ 4ನೇ ತರಗತಿಯ ಹವ್ಯಶ್ರೀ ದ್ವಿತೀಯ, ಅಭಿನಯಗೀತೆಯಲ್ಲಿ 4ನೇ ತರಗತಿಯ ತ್ರಿಶಾ ತೃತೀಯ, ಅರೇಬಿಕ್ ಪಠಂದಲ್ಲಿ 4ನೇ ತರಗತಿಯ ಮುಹಮ್ಮದ್ ಇರ್ಫಾನ್ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ 4ನೇ ತರಗತಿಯ ಫಾತಿಮಾ ಆಯಿಫಾ ತೃತೀಯ, ಸಂಸ್ಕøತ ಪಠಣದಲ್ಲಿ 4ನೇ ತರಗತಿಯ ಹವ್ಯಶ್ರೀ ತೃತೀಯ ಹಾಗೂ ಕ್ಲೇ ಮಾಡೆಲ್‍ನಲ್ಲಿ 4ನೇ ತರಗತಿಯ ರಕ್ಷಿತ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕಿ ವಿದ್ಯಾ.ಕೆ., ಸಹಶಿಕ್ಷಕರಾದ ಮಾಲತಿ ಕೆ., ಪುನಂತೇಶ್ವರಿ, ಅತಿಥಿ ಶಿಕ್ಷಕಿಯರಾದ ಪವಿತ್ರ, ಚಿತ್ರಾವತಿ ಹಾಗೂ ಮಕ್ಕಳ ಪೋಷಕರು ತರಬೇತಿ ನೀಡಿದ್ದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಮಯದಲ್ಲಿ 15 ನಿಮಿಷ ಕಡಿತ ಮಾಡಲಾಗಿದೆ.

ಹೊಸ ನಿಯಮ ಅನುಷ್ಠಾನದ ಬಗ್ಗೆ ಮಂಡಳಿ ಸುತ್ತೋಲೆ ಹೊರಡಿಸಿದೆ. ಈ ಮೊದಲು ಮೂರು ಗಂಟೆಗಳ ಕಾಲ ನಡೆಯುತ್ತಿದ್ದ ಲಿಖಿತ ಪರೀಕ್ಷೆ ಇನ್ನು ಮುಂದೆ 2 ಗಂಟೆ 45 ನಿಮಿಷಗಳ ಕಾಲ ನಡೆಯಲಿದೆ.

ಇದೇ ಶೈಕ್ಷಣಿಕ ವರ್ಷದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಹಿಂದೆ ಲಿಖಿತ ಪರೀಕ್ಷೆಗೆ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ಉತ್ತರಿಸಲು ಪರೀಕ್ಷೆಯಲ್ಲಿ 3 ಗಂಟೆ ಕಾಲಾವಕಾಶ ನೀಡಲಾಗುತ್ತಿತ್ತು. ಈಗ ಗರಿಷ್ಠ 70/80 ಅಂಕಗಳ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು 2.45 ಗಂಟೆಯಲ್ಲಿ ಉತ್ತರ ಬರೆಯಬೇಕಾಗಿದೆ.

ಆದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಯಲ್ಲಿ ಮೂರು ಗಂಟೆ ಕಳೆಯಬೇಕಿದೆ. ಯಾಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಬಳಿಕ ಉತ್ತರಿಸಲು 2 ಗಂಟೆ 45 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

ಎನ್.ಎಸ್.ಕ್ಯು.ಎಫ್ ಹಾಗೂ ಹಿಂದೂಸ್ತಾನಿ ಸಂಗೀತ ವಿಷಯಗಳಲ್ಲಿ 60/40 ಅಂಕಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾದ ಅವಧಿಯನ್ನು ಈ ಹಿಂದಿನಂತೆ 2 ಗಂಟೆ 30 ನಿಮಿಷವನ್ನು ಮುಂದುವರಿಸಲಾಗಿದೆ.

Leave a Reply

error: Content is protected !!