ಹಬ್ಬಗಳ ಆಚರಣೆ ಎನ್ನುವುದು ಹಿಂದೂ ಧರ್ಮದ ಒಂದು ಮಹತ್ವದ ಲಕ್ಷಣ : ಚಂದ್ರಶೇಖರ ಶೇಟ್

ಶೇರ್ ಮಾಡಿ

ನೆಲ್ಯಾಡಿ: ಹಬ್ಬಗಳ ಆಚರಣೆ ಎನ್ನುವುದು ಹಿಂದೂ ಧರ್ಮದ ಒಂದು ಮಹತ್ವದ ಲಕ್ಷಣ. ಹಿಂದೆ ಕಷ್ಟದ ಹಾಗೂ ಬಡತನದ ದಿನಗಳಲ್ಲಿ ಹಬ್ಬಗಳ ಆಚರಣೆಗಳನ್ನು ಪದ್ದತಿಯಂತೆ ಮನೆಗಳಲ್ಲಿ ಆಚರಿಸುತ್ತಿದ್ದರು. ಇವತ್ತು ಅಂತಹ ಆಸೆಗಳಿಲ್ಲ ಹಬ್ಬದ ದಿನ ಊಟ ಮಾಡಬೇಕಲ್ಲ ಅಂತ ಹೇಳಿ ಮಾಡಿದ ಭಕ್ಷಗಳನ್ನು ತಿನ್ನುತ್ತೇವೆ. ಆದರೆ ಈಗ ಆರ್ಥಿಕ ಶಕ್ತಿ ಹೆಚ್ಚಿದೆ ಬೇಕಾದ ವ್ಯವಸ್ಥೆಗಳು ಕೈಗೆಟಕುವಂತಿದೆ ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ನುಡಿದರು.

ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಬಲ್ಯ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ರಾಮನಗರ ಇದರ ಅಂಟಿ ಆಶ್ರಯದಲ್ಲಿ ನಡೆದ 19 ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಹಿಂದೂ ಸಮಾಜ ಅನಾದಿಕಾಲದಿಂದಲೂ ಬದಲಾದ ಸಾಮಾಜಿಕ ಮನಸ್ಥಿತಿ ಹಾಗೂ ಆಯಾ ಕಾಲಘಟ್ಟದ ಅವಶ್ಯಕತೆಗಳನ್ನು ಗಮನಿಸಿ ಆಗಬೇಕಾದ ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬಂದಿರುವುದರಿಂದ ಇವತ್ತು ಹಿಂದೂ ಸಮಾಜ ಪ್ರಸ್ತುತ ಸಾಮಾಜಿಕ ಸವಾಲುಗಳನ್ನು ಸಶಕ್ತವಾಗಿ ಎದುರಿಸುತ್ತಿದೆ.. ಇಂದಿನ ಈ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಈ ಕ್ರೀಡಾ ಚಟುವಟಿಕೆಗಳು ಇವೆಲ್ಲವೂ ಈಗಿನ ಕಾಲಘಟ್ಟದ ಅವಶ್ಯಕತೆ ಇದನ್ನು ನಮ್ಮ ಹಿಂದೂ ಸಮಾಜ ಸ್ವೀಕರಿಸುತ್ತದೆ.

ವೇದಿಕೆಯಲ್ಲಿ ಶ್ರೀ ರಾಮ ಗೆಳೆಯರ ಬಳಗ ರಾಮನಗರ ಇದರ ಅಧ್ಯಕ್ಷ ರಿಷಬ್ ಶೆಟ್ಟಿ ರಾಮನಗರ, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಬಲ್ಯ ಇದರ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ, ನೆಲ್ಯಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

ಅಶೋಕ್ ಆಚಾರ್ಯ ಜಾಲ್ಮನೆ ಪ್ರಾರ್ಥಿಸಿದರು. ಕಿರಣ್ ಪುತ್ತಿಲ ಸ್ವಾಗತಿಸಿದರು, ಅಮ್ಮಿ ಗೌಡ ನಾಲ್ಗುತ್ತು ನಿರೂಪಿಸಿದರು. ಶೀನಪ್ಪ ಗೌಡ ಬರೆಮೇಲು ವಂದಿಸಿದರು.

Leave a Reply

error: Content is protected !!