ನೂಜಿಬಾಳ್ತಿಲ: ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜುನಲ್ಲಿ ತರಬೇತಿ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಫೆ.26: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಹಾಗೂ ಜೇಸಿಐ ನೆಲ್ಯಾಡಿ ಸಹಯೋಗದಲ್ಲಿ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ ದಲ್ಲಿ ಫೆ.25 ರಂದು “ಡಿಜಿಟಲ್ ಮಾಧ್ಯಮಗಳ ಸದ್ಬಳಕೆ,ಬರವಣಿಗೆ,ನಿರ್ವಹಣೆ ಹಾಗೂ ಉದ್ಯೋಗ ಅವಕಾಶ” ವಿಷಯದ ಬಗ್ಗೆ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ “ಪರೀಕ್ಷೆ ಎದುರಿಸುವ” ಬಗ್ಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು.ತರಬೇತುದಾರರಾಗಿ ವಿ.ಕೆ ಕಡಬ,ಕಾರ್ಯಕ್ರಮ ಸಂಯೋಜಕರು ರೇಡಿಯೋ ನಿನಾದ ಎಸ್.ಡಿ.ಎಂ ಕಾಲೇಜು ಉಜಿರೆ ಮತ್ತು ಜೇಸಿ.ಪ್ರದೀಪ್ ಬಾಕಿಲ, ವಲಯ ತರಬೇತುದಾರರು ತರಬೇತಿಯನ್ನು ನಡೆಸಿಕೊಟ್ಟರು.

ಸುಗ್ಗಿ ನೇಜಿ ಸಂಭ್ರಮ ವೀಕ್ಷಿಸಿ Subscribers ಮಾಡಿ

ದೀಪ ಬೆಳಗಿಸುವ ಮೂಲಕ ರೆ.ಫಾ.ಸಖರಿಯಾಸ್ OIC,ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜು,ನೂಜಿಬಾಳ್ತಿಲ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಅಧ್ಯಕ್ಷತೆಯನ್ನು ಡಾ.ಸದಾನಂದ ಕುಂದರ್,ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಇವರು ನೆರವೇರಿಸಿದರು.ಅತಿಥಿಗಳ ಪರಿಚಯವನ್ನು ಜೇಸಿ.ಜಯಂತಿ ಬಿ.ಎಂ, ಅಧ್ಯಕ್ಷರು ಜೇಸಿಐ ನೆಲ್ಯಾಡಿ ಇವರು ಸಭೆಗೆ ಪರಿಚಯಿಸಿದರು.ಜೇಸಿವಾಣಿ ಪ್ರಶಾಂತ್.ಸಿ.ಎಚ್ ವಾಚಿಸಿದರು.ವೇದಿಕೆಯಲ್ಲಿ ಮುಖ್ಯಗುರುಗಳಾದ ಸುಬ್ರಮಣ್ಯ.ಭಟ್ ಉಪಸ್ಥಿತರಿದ್ದರು.ಅತಿಥಿಗಳನ್ನು ವೇದಿಕೆಗೆ ಆಹ್ವಾನ ಹಾಗೂ ಧನ್ಯವಾದ ಸಮರ್ಪಣೆಯನ್ನು ಕಾಲೇಜಿನ ಪ್ರಾಂಶುಪಾಲ ರಾದ ಜಾರ್ಜ್ ಟಿ.ಎಸ್ ನೆರವೇರಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರು,ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

—ಜಾಹೀರಾತು—

 

Leave a Reply

error: Content is protected !!