ಕೊಕ್ಕಡ ಡೇವಿಡ್ ಜೈಮಿ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ವಿಶ್ವ ದಾಖಲೆ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೃಷಿಕ ಡೇವಿಡ್ ಜೈಮಿ ಕೊಕ್ಕಡ ಅವರು ಜಲ ಸಂರಕ್ಷಣಾ ವಿಧಾನ, ವಿಚಾರಗಳನ್ನು ಜನರಿಗೆ ತಲುಪಿಸಿ ಅಭಿಯಾನ ಜಾಗೃತಿ ಮೂಡಿಸಿ ಬಹಳಷ್ಟು ಜನರು ಅವರ ಮಳೆ ನೀರು ಕೊಯ್ಲು ಫಿಲ್ಟರ್ ಬಳಸಿಕೊಂಡು ಬಾವಿ ಬೋರ್ವೆಲ್‌ಗೆ ಮರುಪೂರಣ ಮಾಡಿ ಅಂತರ್ಜಲ ವೃದ್ಧಿಯಲ್ಲಿ ತೊಡಗಿರುತ್ತಾರೆ.

ಈ ಹಿಂದೆ ಆರು ವಿಧಗಳಲ್ಲಿ ಜಲ ಸಂರಕ್ಷಣೆ ಮಾಡುವ ವಿಧಾನವನ್ನು ಪರಿಚಯಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆ ಪಡೆದುಕೊಂಡಿರುವ ಇವರು. ಇದೀಗ ನೂತನ ಸಂಶೋಧನೆಯೊಂದಿಗೆ ಎರಡು ಹೆಚ್ಚಿನ ವಿಧಾನಗಳನ್ನು ಅನ್ವೇಷಿಸಿ ಇದೀಗ ಅಂತರ್ಜಲ ಮಟ್ಟವನ್ನು ಹೆಚ್ಚು ಮಾಡುವ ಎಂಟು ವಿಧಾನಗಳನ್ನು ಅಳವಡಿಸಿದ್ದು ಇದಕ್ಕಾಗಿ ನೋಬೆಲ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Leave a Reply

error: Content is protected !!