ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ಸ್ವಯಂಸೇವಕರು ಸೆ.21ರಂದು ಗುಂಡ್ಯ ಸಮೀಪದ ಐಪಿಸಿಎಲ್ ಜಲವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದರು.
ಐಪಿಸಿಎಲ್ ಕಂಪನಿಯ ಸೀನಿಯರ್ ಇಂಜಿನಿಯರ್ ಮಂಜುನಾಥ ಅವರು ಎನ್ಎಸ್ಎಸ್ ಸ್ವಯಂಸೇವಕರಿಗೆ ನೀರಿನಿಂದ ವಿದ್ಯುತ್ ಉತ್ಪತ್ತಿ ಮಾಡುವ ವಿಧಾನವನ್ನು ವಿವರಿಸಿದರು. ಕೆಂಪುಹೊಳೆ ನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಿ ನೀರನ್ನು ಕೊಳವೆಗಳ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಉತ್ಪಾದಿಸಿದಂತ ವಿದ್ಯುತ್ ಮೆಸ್ಕಾಂ ಇಲಾಖೆಗೆ ಮಾರಾಟ ಮಾಡಲಾಗುತ್ತದೆ. ಜೂನ್-ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು. ಕಂಟ್ರೋಲ್ ರೂಮಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ಉತ್ಪಾದನೆಯಾದ ವಿದ್ಯುತ್ ಯಾವುದೇ ರೀತಿಯಲ್ಲಿಯೂ ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ ಉತ್ಪಾದನೆಯಾದ ವಿದ್ಯುತ್ ಲೈನ್ ನ ಮೂಲಕ ಮೆಸ್ಕಾ ಗೆ ಒದಗಿಸಲಾಗುವುದು ಅಳತೆ ಮಾಡಲು ಮೀಟರ್ ಗಳನ್ನು ಅಳವಡಿಸಲಾಗಿದೆ ಎಂದರು.
ಶಿರಾಡಿ ಗ್ರಾ.ಪಂ ಪಂ.ಅಭಿವೃದ್ಧಿ ಅಧಿಕಾರಿ ಯಶವಂತ ಬೆಲ್ಚಾಡ ಅವರ ಸಹಕಾರದೊಂದಿಗೆ ಕಾಲೇಜಿನ ಪ್ರಾಚಾರ್ಯ ಏಲಿಯಾಸ್.ಎಮ್.ಕೆ ಹಾಗೂ ಸಂಚಾಲಕ ರೆ. ಫಾ.ನೋಮಿಸ್ ಕುರಿಯಾಕೋಸ್ ನಿರ್ದೇಶನದಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ.ಕೆ ಹಾಗೂ ಎನ್ಎಸ್ಎಸ್ ನಾಯಕರದ ಆಶ್ಲೇಷ್ ಮತ್ತು ದೀಕ್ಷಿತ ಹಾಗೂ ತಂಡ ನಾಯಕರಾದ ಸ್ಪಂದನ, ರಿತೇಶ್, ದೀಪಕ್, ಕೀರ್ತಿ ಮತ್ತು ಎನ್ ಎಸ್ ಎಸ್ ಸ್ವಯಂಸೇವಕರು ಭಾಗವಹಿಸಿದರು.