ನೆಲ್ಯಾಡಿ: ನೆಲ್ಯಾಡಿ ವಿಶ್ವಕರ್ಮ ಸೇವಾ ಸಂಘದ ವತಿಯಿಂದ 16ನೇ ವರ್ಷದ ವಿಶ್ವಕರ್ಮ ಪೂಜೆಯು ಕೇಶವ ಆಚಾರ್ಯ ಇವರ ಪೌರೋಹಿತ್ಯದಲ್ಲಿ ಶಿರಾಡಿ ಶ್ರೀ ಧರ್ಮಶಾಸ್ತ್ರ ಭಜನಾ ಮಂದಿರದಲ್ಲಿ ಸೆ.22ರಂದು ನಡೆಯಿತು.
ಬೆಳಿಗ್ಗೆ ವಿಶ್ವಕರ್ಮ ಪೂಜೆ ಬಳಿಕ ಭಜನಾ ಕಾರ್ಯಕ್ರಮ, ಮಹಾಪೂಜೆ ನಡೆದು ಧಾರ್ಮಿಕ ಸಭಾ ಕಾರ್ಯ ನಡೆಯಿತು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುರೇಂದ್ರ ಪಿ.ಟಿ. ಕಡಬ ಅವರು ವಹಿಸಿ ಮಾತನಾಡಿ, ಸಂಘದ ಅಭಿವೃದ್ದಿಗೆ ಸಮಾಜ ಭಾಂದವರು ಕೈ ಜೋಡಿಸಬೇಕು, ಈ ಮೂಲಕ ಸಂಘಟಿತರಾಗಿ ನಾವು ಇನ್ನಷ್ಟು ಸದೃಢರಾಗಬೇಕು ಎಂದು ಹೇಳಿದ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪುರೋಹಿತ ಕೇಶವ ಆಚಾರ್ಯ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಿ.ಕ.ಸೇ.ಸಂ. ನೆಲ್ಯಾಡಿ ಇದರ ನಿವೇಶನ ಖರೀದಿ ಅಧ್ಯಕ್ಷ ಶಶಿಧರ ಕೆ.ಆರ್.ಶಿರಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ತಂಗಮಣಿ ಕೆ.ಆರ್.ಶಿರಾಡಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಶಶೀಂದ್ರ ಆಚಾರ್ಯ ವರದಿ ವಾಚಿಸಿದರು. ರಾಜಶ್ರೀ ಸುರೇಂದ್ರ ಕಡಬ ಪ್ರಾರ್ಥಿಸಿದರು. ಸುರೇಂದ್ರ ಶಿರಾಡಿ ಸ್ವಾಗತಿಸಿದರು, ಶಿಕ್ಷಕಿ ಉಷಾ ಕೆ.ಕೆ. ವಂದಿಸಿದರು. ಶಿಕ್ಷಕಿ ಸುಧಾಶ್ರೀಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.