ನೆಲ್ಯಾಡಿ ಗ್ರಾಮದ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ನ ನವೀಕರಣದ ಭಾಗವಾಗಿ ನೂತನ ಮಸ್ಜಿದ್ ನ ಶಂಕುಸ್ಥಾಪನೆ ಕಾರ್ಯಕ್ರಮ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಉಡುಪಿ, ಚಿಕ್ಕಮಗಳೂರು ಹಾಗು ಹಾಸನ ಜಿಲ್ಲೆಯ ಖಾಝಿ ಮಹಲ್ ಖಾಝಿಯು ಆಗಿರುವ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವ ವಹಿಸಿದ್ದರು.
ಕೆ ಜಿ ಎನ್ ದ ಅವಾ ಕಾಲೇಜು ಮಿತ್ತೂರು ಇದರ ಪ್ರಾಚಾರ್ಯ ಸಯ್ಯದ್ ಸ್ವಲಾಹುದ್ದೀನ್ ಜಮಲುಲೈಲಿ ಅಲ್-ಅದನಿ ಪೆರುಮುಗಮ್, ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ಖತೀಬ್ ಉಸ್ತಾದ್ ಅಬ್ದುಲ್ ರಝಾಕ್ ಸಖಾಫಿ, ಶಾಫಿ ಮರ್ಝೂಕಿ, ಉಳಿತೊಟ್ಟು ಮಸ್ಜಿದ್ ಅಧ್ಯಕ್ಷ ಶರೀಫ್ ತಾಜ್, ಉಳಿತೊಟ್ಟು ಮಸೀದಿ ನಿರ್ಮಾಣ ಕಮೀಟಿ ಅಧ್ಯಕ್ಷ ಹನೀಫ್ ಬಿಲಾಲ್, ಉಳಿತೊಟ್ಟು ಮಸ್ಜಿದ್ ಕಾರ್ಯದರ್ಶಿ ರಸೂಲ್ ಸಾಹೇಬ್, ಇಸಾಕ್ ಪೊಲೀಸ್, ನೆಲ್ಯಾಡಿ ಬದ್ರಿಯಾ ಮಸ್ಜಿದ್ ಅಧ್ಯಕ್ಷ ಹನೀಫ್ ಸಿಟಿ, ಹೊಸಮಜಲು ಜಲಾಲಿಯ್ಯ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ಯಮಿ ರಫೀಕ್ ಸೀಗಲ್, ಹನೀಫ್ ಭಾರತ್ ನೆಲ್ಯಾಡಿ, ಇಕ್ಬಾಲ್ ಕೋಲ್ಪೆ, ಶರೀಫ್ ಬೋಳದ ಬೈಲ್ ಕೊಕ್ಕಡ, ನಾಝಿಮ್ ಸಾಹೇಬ್, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಕಾಂಟ್ರಾಕ್ಟರ್ ಅಬ್ಬಾಸ್ .ಕೆ.ಯು ಹೊಸಮಜಲು ಹಾಗು ಜಮಾಅತ್ ಭಾಂದವರು ಉಪಸ್ಥಿತರಿದ್ದರು.