ನೇಸರ ಫೆ.27: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಲ್ಲಿ ಇರಬೇಕಾದ ಸಿದ್ಧತೆಗಳು ಮತ್ತು ದಿನಚರಿ,ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಎಲ್ಲರೂ ಕೂಡ ಸೂಕ್ತ ಸಿದ್ಧತೆಯನ್ನು ಬರುವುದಿಲ್ಲ ಕೆಲವು ಅಭ್ಯರ್ಥಿಗಳು ಮಾತ್ರ ನಿರಂತರ ಅಭ್ಯಾಸ ಪರಿಶ್ರಮದ ಮೂಲಕ ಸಿದ್ಧತೆಯೊಂದಿಗೆ ಹಾಜರಾಗುತ್ತಾರೆ ಅಭ್ಯರ್ಥಿಗಳು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಜೀವನ ನಿರೂಪಿಸುತ್ತಾರೆ.ಅಲ್ಲದೆ ಹಾರ್ಡ್ ವರ್ಕ್ ಮತ್ತು ಸ್ಮಾರ್ಟ್ ವರ್ಕ್ ಗಳ ವ್ಯತ್ಯಾಸವನ್ನು ಪ್ರಸ್ತಾಪಿಸುತ್ತಾ ಗುರಿಯೆಡೆಗೆ ಸಾಗಲು ಆಮೆ ಮತ್ತು ಮೊಲದ ಕಥೆ ಯಲ್ಲಿ ಬರುವ ಆಮೆಯ ನಿರಂತರ ಪರಿಶ್ರಮ ಮತ್ತು ನಿಮಗೆ ಮಾದರಿಯಾಗುತ್ತದೆ ಎಂದರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಏಕಾಗ್ರತೆ ಮತ್ತು ಒಳ್ಳೆಯ ಸಂವಾದಗಳ ದೀರ್ಘಕಾಲದ ನೆನಪಿಗೆ ವೇದಿಕೆ ಒದಗಿಸಿಕೊಡುತ್ತದೆ ಎನ್ನುತ್ತಾ ವಿದ್ಯಾರ್ಥಿ ಜೀವನದಿಂದಲೇ ಈ ರೀತಿಯ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯನ್ನು ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನ ಅರ್ಥಶಾಸ್ತ್ರ ಸಂಘದ ವತಿಯಿಂದ ಫೆ 24ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಸೂಕ್ತ ಸಿದ್ಧತೆಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ನಂದೀಶ್ ಅವರು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ, ಮಾತನಾಡಿದ ಡಾ.ಜಯರಾಜನ್.ಎನ್ ಸ್ಪರ್ಧಾತ್ಮಕ ಪರೀಕ್ಷೆಗಳು ಯಶಸ್ವಿನ ಮೆಟ್ಟಿಲುಗಳು ಪ್ರತಿಯೊಂದು ಪರೀಕ್ಷೆಯು ನಿಮ್ಮಲ್ಲಿ ಪ್ರತಿಭೆ ನೈಪುಣ್ಯತೆ ಮತ್ತು ಪರಿಶ್ರಮದ ಫಲವನ್ನು ಕೊಡುತ್ತದೆ ನಿಮ್ಮ ಗುರಿ ಐ.ಎ.ಎಸ್, ಐ.ಪಿ.ಎಸ್ ನಂತಹ ನಾಗರಿಕ ಸೇವೆಯ ಹುದ್ದೆಗಳನ್ನು ಪಡೆಯುವತ್ತ ಕೇಂದ್ರೀಕೃತವಾಗಿ ರಬೇಕು ಇದಕ್ಕೆ ಸೂಕ್ತವಾದ ಸಿದ್ಧತೆ ಮತ್ತು ತರಬೇತಿಯನ್ನು ಪಡೆಯುವುದರ ಜೊತೆಗೆ ನಿಮ್ಮ ತೊಡಗುವಿಕೆ ಮೇಲೆ ನಿಮ್ಮ ಹೆಸರು ಅವಲಂಬಿಸಿರುತ್ತದೆ ಪ್ರತಿ ಪ್ರಸ್ತುತ ಕಾಲದಲ್ಲಿ ಸರಕಾರಿ ಮತ್ತು ಖಾಸಗಿ ಎರಡೂ ಕ್ಷೇತ್ರದಲ್ಲಿಯೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಉದ್ಯೋಗ ಪಡೆದುಕೊಳ್ಳಲು ಅವಕಾಶಗಳು ಇರುವುದರಿಂದ ಯಾರೂ ಕೂಡ ಅವಕಾಶಗಳಿಂದ ವಂಚಿತರಾಗದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೊಲಾಜ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಉಪನ್ಯಾಸಕರಾದ ಡಾ.ನೂರಂದಪ್ಪ ರವರು ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು.ಪ್ರಾಸ್ತಾವಿಕವಾಗಿ ಅರ್ಥಶಾಸ್ತ್ರ ಉಪನ್ಯಾಸಕಿ ಸ್ಪೂರ್ತಿ.ಕೆ.ಟಿ ಅವರು ಮಾತನಾಡಿ ಕಾರ್ಯಕ್ರಮ ಉದ್ದೇಶ ಮತ್ತು ಆಶಯಗಳನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಉಪನ್ಯಾಸಕಿ ಶ್ರುತಿ ನಿತಿನ್ ಅವರು ಮಾಡಿದರು.ಪ್ರಾರ್ಥನೆ ವೀಣಾ. ಪಿ.ಎಸ್ ಮತ್ತು ತಂಡದವರು ಮಾಡಿದರು. ವಿಶಾಲ್.ಎನ್.ಟಿ ವಂದಿಸಿದರು ಮಹಮ್ಮದ್ ಲುಕ್ಮಾನ್.ಕೆ.ಎಂ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
—ಜಾಹೀರಾತು—