ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ

ಶೇರ್ ಮಾಡಿ

ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆಯು ಅ.2ರಂದು ನಡೆಯಿತು.

ಸುಬ್ರಮಣ್ಯ ಆರಕ್ಷಕ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಇ.ಜಿ ತೋಮಸ್ ಅವರು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರಪಿತ ಗಾಂಧೀಜಿಯವರ ತತ್ವಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಂಸ್ಥೆಯಲ್ಲಿ ಕ್ರೀಡಾಪಟುಗಳಿಗೆ ಕೊಡುವ ಪ್ರೋತ್ಸಾಹವನ್ನು ಅಭಿನಂದಿಸಿದರು. ಈ ಸಂಸ್ಥೆಯಲ್ಲಿ ಓದುತ್ತಾ ಇದ್ದಾಗ ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿ ಅನೇಕ ಪ್ರಶಸ್ತಿಗಳನ್ನು ಸಂಸ್ಥೆಗೆ ತಂದು ಕೊಟ್ಟದ್ದನ್ನು ನೆನಪಿಸಿಕೊಂಡರು. ಪ್ರಸ್ತುತ ಸಂಸ್ಥೆಯಲ್ಲಿ ಓದುತಿರುವ 20 ಕ್ರೀಡಾಪಟುಗಳಿಗೆ ಸುಮಾರು 30 ಸಾವಿರ ರೂಪಾಯಿಗಳ ಶೂ ಗಳನ್ನು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ರೆ.ಫಾ.ವಿಜೋಯ್ ವರ್ಗೀಸ್, ರಾಷ್ಟ್ರಪಿತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹುಟ್ಟುಹಬ್ಬ ಆಚರಿಸಿದ ತೋಮಸ್ ಅವರು ಕೇಕನ್ನು ಕತ್ತರಿಸಿ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದರು. ದಸರಾ, ಪದವಿಪೂರ್ವ ವಿಭಾಗದ ಕಬ್ಬಡಿ ಪಂದ್ಯಾಟ, ಕೋ ಕೋ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಶಾಲಾ ಕೈತೋಟದಲ್ಲಿ ತರಕಾರಿ, ಹೂ ಗಿಡಗಳನ್ನು ನೆಟ್ಟರು.

ಪ್ರಾಂಶುಪಾಲರಾದ ಜಾರ್ಜ್.ಟಿ.ಎಸ್, ಮುಖ್ಯಶಿಕ್ಷಕ ಥೋಮಸ್.ಏ.ಕೆ, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Leave a Reply

error: Content is protected !!