ಕೊಕ್ಕಡ: ಕರ್ನಾಟಕ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು,ಮಂಗಳೂರು ಕಿನ್ನಿಕಂಬಳ ರೋಸಾ ಮಿಸ್ತಿಕ ಪ.ಪೂ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಅ.3ರಂದು ಕೌಕ್ರಾಡಿ-ಕೊಕ್ಕಡ ಸಂತ ಜೋನರ ಹಿ.ಪ್ರಾ. ಶಾಲಾ ಸಭಾಭವನದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತು ಉದ್ಘಾಟನೆಯನ್ನು ಮಂಗಳೂರು ಬೆಥನಿ ಪ್ರಾಂತ್ಯಾಧಿಕಾರಿಣಿ ಲಿಲ್ಲಿ ಪಿರೇರ.ಬಿ.ಎಸ್ ಅವರು ನಡೆಸಿಕೊಟ್ಟರು. ಸಂತ ಜೋನರ ದೇವಾಲಯ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿಸಿಲ್ವ ಅವರು ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಸಂತ ಜೋನರ ಹಿ.ಪ್ರಾ. ಶಾಲೆ ಮುಖ್ಯಶಿಕ್ಷಕಿ ಜೆನೆವಿವ್ ಫೆರ್ನಾಂಡೀಸ್,ಕೊಕ್ಕಡ ಕಪಿಲ ಅಧ್ಯಕ್ಷ ಸಂತೋಷ್ ಜೈನ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್, ಕೊಕ್ಕಡ ಸಂತ ಜೋನರ ದೇವಾಲಯ ಪಾಲನಾ ಸಮಿತಿ ಉಪಾಧ್ಯಕ್ಷ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ, ಮಿಸ್ತಿಕ ಪ.ಪೂ ಕಾಲೇಜು ಸಂಚಾಲಕಿ ರೋಸ್ ಲೀಟಾ.ಬಿ.ಎಸ್ , ರೋಸಾ ಮಿಸ್ತಿಕಾ ಪ.ಪೂ ಕಾಲೇಜು ಪ್ರಾಚಾರ್ಯ ಡಾ.ಸಾಧನಾ ಬಿ.ಎಸ್ ಉಪಸ್ಥಿತರಿದ್ದರು.
ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೆಶ್ ಬಾಣಜಾಲು ಅವರು ಶುಭ ಹಾರೈಸಿದರು. ಸದಸ್ಯ ಮಹೇಶ್ ಉಪಸ್ಥಿತರಿದ್ದರು.
ಅ.3ರಿಂದ ಅ.9ರವರೆಗೆ ನಡೆಯುವ ಎನ್ ಎಸ್ ಎಸ್ ಶಿಬಿರದಲ್ಲಿ 51 ಶಿಬಿರಾರ್ಥಿಗಳು ಭಾಗವಹಿಸುತ್ತಾರೆ. ಡಾ.ಸಾಧನಾ ಸ್ವಾಗತಿಸಿದರು, ಸಹಶಿಬಿರಾಧಿಕಾರಿ ಆ್ಯಮ್ಸಿಲ್ ಫೆರ್ನಾಂಡೀಸ್ ವಂದಿಸಿದರು. ಶಿಬಿರಾಧಿಕಾರಿ ಅವಿಲ್ ರೆನಿಲ್ ಡಿಸಿಲ್ವಾ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು, ಪೋಷಕರು, ಊರ ನಾಗರಿಕರು ಭಾಗವಹಿಸಿದರು.