ಎರಡೂ ವಿಭಾಗದಲ್ಲೂ ಆಳ್ವಾಸ್ ಮೂಡುಬಿದಿರೆ ಚಾಂಪಿಯನ್
ನೆಲ್ಯಾಡಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜು ವರ್ಷ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟ ಮಂಗಳೂರು ಸ್ಪ್ರಿಂಗ್ಸ್ ಇನ್ಸ್ಟಿಟ್ಯೂಟ್ ಪ್ರಾಯೋಜಕತ್ವದಲ್ಲಿ ನೂಜಿಬಾಳ್ತಿಲದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ವಂ.ವಿಜಯ್ ವರ್ಗೀಸ್ ಅವರು ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಮಾಮಚ್ಚನ್, ಸುಬ್ರಹ್ಮಣ್ಯ ಠಾಣಾ ಎ ಎಸೈ ಈ.ಜಿ.ತೋಮಸ್, ಅಂತರಾಷ್ಟ್ರೀಯ ಅಥ್ಲೆಟಿಕ್ ತೀರ್ಪುಗಾರ ಡಾ.ರಾಧಾಕೃಷ್ಣ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಲಿನ್.ಕೆ.ಪಿ., ಅಂತರಾಷ್ಟ್ರೀಯ ಕ್ರೀಡಾಪಟು ದಾಮೋದರ ಗೌಡ, ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ, ಬೆಥನಿ ಸಂಸ್ಥೆಯ ಮುಖ್ಯಶಿಕ್ಷಕ ತೋಮಸ್.ಎ.ಕೆ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್. ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪುನಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾಲೇಜಿನ ಶಾಂಭವಿ, ಬೀನಾ, ಜಿನ್ಸಿ, ಜಿನಿ, ಆ್ಯನಿ ತೋಮಸ್, ದಿಲ್ಸಾದ್, ಬಿಜು, ಶಿಲ್ಪಾ, ಸಂತೋಷ್, ಸುಮಿತಾ, ಯೋಹನಾನ್, ಅನ್ನಮ್ಮ ಮತ್ತಿತರರು ಸಹಕರಿಸಿದರು.
ಆಳ್ವಾಸ್ ಚಾಂಪಿಯನ್:
ಬಾಲಕರ ವಿಭಾಗದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ರಂಗಣ್ಣ ನಾಯಕರ್ ಪ್ರಥಮ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ರಘುವೀರ್ ಎಲ್. ದ್ವಿತೀಯ, ಉಜಿರೆ ಎಸ್.ಡಿ.ಎಂ.ನ ದರ್ಶನ್ ಎಚ್.ಕೆ. ತೃತೀಯ, ಆಳ್ವಾಸ್ ನ ಹನುಂತಯ್ಯ ಚತುರ್ಥ, ಆಳ್ವಾಸ್ ನ ಶಿವಾನಂಧ ಕೆ.ಪಿ. ಐದನೇ ಸ್ಥಾನ, ಉಜಿರೆ ಎಸ್.ಡಿ.ಎಂ.ನ ಆದಿತ್ಯ ಎಂ.ಪಿ. ಆರನೇ ಸ್ಥಾನ ಪಡೆದುಕೊಂಡರು. ಬಾಲಕಿಯತ ವಿಭಾಗದಲ್ಲಿ ಆಳ್ವಾಸ್ ನ ಚರಿಷ್ಮಾ ಪ್ರಥಮ, ಆಳ್ವಾಸ್ ನ ಘಾನವಿ ದ್ವಿತೀಯ, ಅರಂತೋಡು ಎನ್.ಎಂ.ಪಿ.ಯು.ಸಿ. ಯ ದೀಪ್ತಿ ಪಿ.ಸಿ. ತೃತೀಯ, ಆಳ್ವಾಸ್ ನ ಅಂಬಿಕಾ ಚತುರ್ಥ, ಆಳ್ವಾಸ್ ನ ನವಿತಾ ಐದನೇ ಸ್ಥಾನ, ನೂಜಿಬಾಳ್ತಿಲ ಬೆಥನಿಯ ಸ್ವಾತಿ ಆರನೇ ಸ್ಥಾನ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ಆಳ್ವಾಸ್ ಮೂಡುಬಿದಿರೆ ಕಾಲೇಜು ಪ್ರಥಮ, ಉಜಿರೆ ಎಸ್.ಡಿ.ಎಂ. ಕಾಲೇಜು ದ್ವಿತೀಯ, ನೂಜಿಬಾಳ್ತಿಲ ಬೆಥನಿ ತೃತೀಯ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ನೂಜಿಬಾಳ್ತಿಲ ಬೆಥನಿ ದ್ವಿತೀಯ, ಅರಂತೋಡು ಎನ್.ಎಂ.ಪಿ.ಯು.ಸಿ. ತೃತೀಯ ತಂಡ ಪ್ರಶಸ್ತಿ ಪಡೆದುಕೊಂಡರು.
ಬೆಥನಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮತ್ತಾಯಿ ಓ.ಜೆ., ವಾಮದಪದವು ಕಾಲೇಜಿನ ಡಾ.ರಾಧಾಕೃಷ್ಣ, ಆಳ್ವಾಸ್ ಕಾಲೇಜಿನ ನವೀನ್ ರೈ, ಎಸ್.ಡಿ.ಎಂ.ಕಾಲೇಜಿನ ಸಂದೇಶ್, ಸಂತೋಷ್, ನವೀನ್, ಆಳ್ವಾಸ್ ಕಾಲೇಜಿನ ಆನಂದ ಪಿ.ಎಂ., ಬೆಂಗಳೂರಿನ ರೇವಾ ಇನ್‌ಸ್ಟಿಟ್ಯೂಟ್ ಕಾಲೇಜಿನ ಜಯಾನಂದ್, ಕ್ಲಾರೆಟ್ ಸಂಸ್ಥೆಯ ಶಾಲಿನಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಆಶಾ, ಮೂಡುಬಿದಿರೆಯ ರೇಷ್ಮಾ ಮತ್ತಿತರರು ತಾಂತ್ರಿಕವಾಗಿ ಸಹಕರಿಸಿದರು.