ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ವಂಚನೆ, ಸೈಬರ್ ಅಪರಾಧಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆ, ಅನ್ಯಾಯಗಳನ್ನು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಹಾಗೂ ವರದಿ ಬಹಿರಂಗ ಪಡಿಸಬೇಕು. ಎಲ್ಲಾ ಅನ್ಯಾಯಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಅ.14ರಂದು ಕೊಕ್ಕಡ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಕೊಕ್ಕಡ ಕೆನರಾ ಬ್ಯಾಂಕಿನ ದೌರ್ಜನ್ಯ, ಅಕ್ರಮ ವಿರೋಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ಧಿಷ್ಟ ದರಣಿ ಸತ್ಯಾಗ್ರಹ ನಡೆಯಿತು.
ಭಾಷೆ ಸಮಸ್ಯೆ:
ಇಲ್ಲಿನ ಹೆಚ್ಚಿನ ಸಿಬ್ಬಂದಿಗಳಿಗೆ ವ್ಯವಹರಿಸಲು ಭಾಷೆ ಸಮಸ್ಯೆ ಆಗುತ್ತಿರುವುದರಿಂದ ಗ್ರಾಹಕರಿಗೆ ಬ್ಯಾಂಕಿನೊಂದಿಗೆ ವ್ಯವಹಾರ ನಡೆಸಲು, ತಮಗಾದ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ
ಬ್ಯಾಂಕಿನ ಸರಾಫ ವಜಾ:
ಕಳೆದ 19ವರ್ಷಗಳಿಂದ ಬ್ಯಾಂಕಿನ ಸರಾಫರಾಗಿ ಕೆಲಸ ನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯ ಅವರನ್ನು ಸಕಾರಣವಿಲ್ಲದೆ ಆರೋಪಿಯನ್ನಾಗಿ ಬಿಂಬಿಸಿ ಕೆಲಸದಿಂದ ವಜಾ ಮಾಡಲಾಗಿದೆ,ಬ್ಯಾಂಕ್ ಅಧಿಕಾರಿಗಳಲ್ಲಿ ಕಾರಣ ಕೇಳಿದಾಗ ನಿರ್ಲಕ್ಷ್ಯ ಮತ್ತು ದುಷ್ಕೃತ್ಯ ಎಸಗಿದ್ದಿರಿ ಎಂಬುದಾಗಿ ಸರಾಫನಿಗೆ ಆರೋಪ ಹೊರಿಸಿದ್ದಾರೆ ವಿನಾಕಾರಣ. ಇದು ಸತ್ಯಕ್ಕೆ ದೂರವಾದ ವಿಷಯ ಸರಿಯಾದ ಕಾರಣ ನೀಡುವಂತೆ ಒತ್ತಾಯಿಸಲಾಯಿತು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಸಂಘಟಕರು ತಿಳಿಸಿದರು.
ಹೋರಾಟದಲ್ಲಿ ನ್ಯಾಯವಾದಿ ಬಿ.ಎಂ ಭಟ್, ಸಾಮಾಜಿಕ ಹೋರಾಟಗಾರರಾದ ಈಶ್ವರಿ, ಧನಂಜಯ, ಶೀನ ನಾಯ್ಕ್, ತುಕ್ರಪ್ಪ ಶೆಟ್ಟಿ, ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಇಸ್ಮಾಯಿಲ್, ಸಮಾಜ ಸೇವಕ ಶಾಮರಾಜ್, ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಡಾ.ಗಣೇಶ್ ಪ್ರಸಾದ್, ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಸದಸ್ಯ ಪ್ರಶಾಂತ.ರೈ, ಗ್ರಾಹಕರಾದ ಜೇಸುದಾಸ್, ನಾರಾಯಣಗೌಡ, ಸತ್ಯದಾಸ್, ಶ್ರೀಧರ ಗೌಡ, ಆನಂದ.ರೈ, ಶಾಂತಪ್ಪ ಮಡಿವಾಳ, ಫಾರೂಕ್ ಬ್ಯಾಂಕಿನ ಸರಾಫ ಪದ್ಮನಾಭ ಆಚಾರ್ಯ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.