ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ನಿಧನ

ಶೇರ್ ಮಾಡಿ

ಬೆಳ್ತಂಗಡಿ : ನಾರಾವಿ ಗ್ರಾಮದ ನೂಜೋಡಿ ಎಂಬಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅ.19ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿ ಮೋಂಟ ಮಲೆಕುಡಿಯ (76ವ) ಎಂದು ಗುರುತಿಸಲಾಗಿದೆ. ಮನೆಯ ಸಮೀಪವಿರುವ ಎಲ್‌.ಟಿ. ವಿದ್ಯುತ್‌ ಲೈನ್ ನ ಮೇಲೆ ಬಿದ್ದ ತೆಂಗಿನ ಗರಿಯನ್ನು ದೋಟಿಯ ಮೂಲಕ ತೆಗೆಯಲು ಹೋದ ಸಂದರ್ಭ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!