ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗೋಳಿತ್ತೊಟ್ಟು ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ಶೇರ್ ಮಾಡಿ

ನೆಲ್ಯಾಡಿ: ಪಶ್ಚಿಮಘಟ್ಟ ಪ್ರದೇಶದಲ್ಲಿನ ಸೂಕ್ಷ್ಮ ವಲಯ ಗುರುತಿಸಿ ಕಸ್ತೂರಿ ರಂಗನ್ ಸರಕಾರಕ್ಕೆ ನೀಡಿರುವ ವರದಿ ಕೈಬಿಡುವಂತೆ ಒತ್ತಾಯಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಅ.25ರಂದು ಸಂಜೆ ಗೋಳಿತ್ತೊಟ್ಟು ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಗೋಳಿತ್ತೊಟ್ಟು ಹಾಗೂ ಆಲಂತಾಯ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ವಿಚಾರ ಪಶ್ಚಿಮಘಟ್ಟ ಪ್ರದೇಶದ ಅಂಚಿನಲ್ಲಿ ವಾಸಿಸುವ ಜನರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇದರ ವಿರುದ್ಧ ಪಕ್ಷ, ಜಾತಿ ಮರೆತು ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನ.15ರಂದು ಸುಬ್ರಹ್ಮಣ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಪ್ರತಿ ಮನೆಯಿಂದ ಒಬ್ಬ ಸದಸ್ಯನಾದರೂ ಭಾಗವಹಿಸಬೇಕು. ಪ್ರತಿಭಟನೆಯ ಯಶಸ್ವಿಗೆ ನ.10ರಂದು ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಶ್ರದ್ಧಾಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕೆಂದು ಹೇಳಿದರು. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಕೃಷಿಕರಿಗೆ ನೀಡಿರುವ ಹಕ್ಕು ಪತ್ರ ಅನಧಿಕೃತ ಎಂದು ಅರಣ್ಯ ಇಲಾಖೆಯೇ ನಮಗೆ ಮಾಹಿತಿ ನೀಡಿದೆ. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕಳೆದ 14 ವರ್ಷಗಳಿಂದ ಜನರ ಪರವಾಗಿ ಹೋರಾಟ ಮಾಡುತ್ತಿದೆ. ಸರಕಾರ ವಿವಿಧ ಯೋಜನೆಗಳ ಜಾರಿ ಮೂಲಕ ಜನರ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕೆಂದು ಕಿಶೋರ್ ಶಿರಾಡಿ ಹೇಳಿದರು.

ಸಭೆಯ ಬಳಿಕ ಕಸ್ತೂರಿ ರಂಗನ್ ವರದಿ ಕೈ ಬಿಡುವಂತೆ ಒತ್ತಾಯಿಸಿ ಗೋಳಿತ್ತೊಟ್ಟು ಗ್ರಾ.ಪಂ.ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಪುಲಾರ, ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಜನಾರ್ದನ ಪಟೇರಿ, ಬಾಲಕೃಷ್ಣ ಅಲೆಕ್ಕಿ, ಶಿವಪ್ರಸಾದ್ ಶಿವಾರು, ಪದ್ಮನಾಭ ಪೂಜಾರಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ತಾಲೂಕು ಸಮಿತಿ ಸದಸ್ಯರಾದ ಅಚ್ಚುತ ದೇರಾಜೆ, ಗಣೇಶ್ ಭಟ್ ದೇವರಡ್ಕ, ಯೋಗೀಂದ್ರ ಬನಾರಿ ಬಲ್ಯ, ಗ್ರಾಮಸ್ಥರಾದ ವೆಂಕಪ್ಪ ಗೌಡ ಡೆಬ್ಬೇಲಿ, ಕುಶಾಲಪ್ಪ ಗೌಡ ಅನಿಲ, ಶೇಖರ ಗೌಡ ಅನಿಲಬಾಗ್, ನಾಸಿರ್ ಸಮರಗುಂಡಿ, ಕೆ.ಪಿ.ವೆಂಕಟ್ರಮಣ ಭಟ್, ಕೊರಗಪ್ಪ ಗೌಡ ಕಲ್ಲಡ್ಕ, ಕಮಲಾಕ್ಷ ಜಿ., ಪ್ರಸಾದ್ ಕೆ.ಪಿ. ಸುಲ್ತಾಜೆ, ಶಾಲಿನಿಶೇಖರ ಗೋಳಿತ್ತೊಟ್ಟು, ಗಣೇಶ್ ಬೊಟ್ಟಿಮಜಲು, ರಮೇಶ್ ಕಲ್ಲಡ್ಕ, ತಾರನಾಥ ಬಳಕ್ಕ, ನಾಗೇಶ್ ಶೆಟ್ಟಿ ಸಮರಗುಂಡಿ, ಪ್ರಕಾಶ್ ಪಟೇರಿ, ರವೀಂದ್ರ ಗೌಡ ಕಲ್ಲಡ್ಕ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ಚಿದಾನಂದ ಗೌಡ ಕಲ್ಲಡ್ಕ, ಶಿವರಾಮ ಅಲೆಕ್ಕಿ, ಶೇಖರ ಗೌಡ ಬೊಟ್ಟಿಮಜಲು, ನಾರಾಯಣ ಶೆಟ್ಟಿ ಅಂಬುಡೇಲು, ರವಿ ಶಿವಾರು, ಅಣ್ಣಪ್ಪ ಗೌಡ, ಸುಂದರ ಶೆಟ್ಟಿ ಪುರ, ಕೇಶವ ಗೌಡ ಬೊಟ್ಟಿಮಜಲು, ಪಾರ್ಶ್ವನಾಥ ಜೈನ್ ಆಲಂತಾಯ, ದಯಾನಂದ ಗೌಡ ಡೆಬ್ಬೇಲಿ, ಜನಾರ್ದನ ಶಾಂತಿಮಾರು, ರಮೇಶ್ ಕೆ.ಬಿ.ಕೊಂಕೋಡಿ, ಬಾಲಕೃಷ್ಣ ಅಲಂಗಪೆ, ಸುರೇಶ ಅಲಂಗಪೆ, ಪರಮೇಶ್ವರ ಎಡ್ಮೆ, ಸುಬ್ರಹ್ಮಣ್ಯ ಪ್ರಸಾದ್, ಹರೀಶ್ ಶೆಟ್ಟಿ ಸಮರಗುಂಡಿ, ಬೆಳಿಯಪ್ಪ ಗೌಡ, ಸುಂದರಿ ಅಲಂತಾಯ, ಶರತ್‌ಕುಮಾರ್ ಪುಲಾರ, ಚಂದ್ರಪಾಲೇರಿ, ಕೃಷ್ಣಪ್ಪ ಪೂಜಾರಿ ಕೊಣಾಲು, ಸಂದೇಶ್ ಎಡ್ಮೆ, ಧರ್ಣಪ್ಪ ಗೌಡ ಆಲಂತಾಯ, ಉಮೇಶ್ ಆಚಾರ್ಯ ಗೋಳಿತ್ತೊಟ್ಟು, ಕಿಶೋರ್ ಜೈನ್ ಆಲಂತಾಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಯಂತ ಅಂಬರ್ಜೆ ಸ್ವಾಗತಿಸಿ, ನಿರೂಪಿಸಿದರು.

Leave a Reply

error: Content is protected !!