ತುಳುನಾಡ ತುಡರ್ ವಾಟ್ಸಪ್ ಗ್ರೂಪ್‍ನಿಂದ ಕಿಟ್ ವಿತರಣೆ

ಶೇರ್ ಮಾಡಿ

ನೆಲ್ಯಾಡಿ: ತುಳುನಾಡ ತುಡರ್ ವಾಟ್ಸಪ್ ಗ್ರೂಪ್‍ನ 3ನೇ ವರ್ಷದ ಧನಸಹಾಯ ಕೂಪನ್ ಡ್ರಾ, ಪ್ರಜ್ಞಾ ವಿಕಲಚೇತನ ಆಶ್ರಮ ಪುತ್ತೂರು ಇಲ್ಲಿಗೆ ಕಿಟ್ ವಿತರಣೆ ಹಾಗೂ ವಿಶೇಷ ಮನೋರಂಜನೆಯ ಆಟೋಟ ಸ್ಪರ್ಧೆಗಳು ಅ.27ರಂದು ಬಜತ್ತೂರು ಮುದ್ಯ ಪಾರ್ವತಿ ಪಂಚಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು.

ಕುಣಿತ ಭಜನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು ನಡೆಯಿತು. 8 ಅಶಕ್ತ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಬಜತ್ತೂರು ಗ್ರಾಮ ನಿವಾಸಿಗಳಾದ ದೇವಕಿಹರೀಶ್ ವಳಾಲು, ಪೂವಕ್ಕ ನೀರಕಟ್ಟೆ, ತನಿಯ ಕೆದು, ಉಪ್ಪಿನಂಗಡಿ ಗ್ರಾಮ ನಿವಾಸಿಗಳಾದ ಯಮುನ ಅರ್ತಿಲ, ಭಾಗ್ಯ ರಾಮನಗರ, ಪುಷ್ಪಾ ದಡ್ಡು, ಹೊನ್ನಮ್ಮ ಅರ್ತಿಲ ಹಾಗೂ ಜನಾರ್ದನ ಹಿರೇಬಂಡಾಡಿ ಅವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ವಿಶೇಷವಾಗಿ ಪುತ್ತೂರಿನ ಪ್ರಜ್ಞಾ ವಿಕಲಚೇತನ ಆಶ್ರಮಕ್ಕೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಮುದ್ಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ ಗೌಡ ದಡ್ಡು, ಮುದ್ಯ ಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ನೀರಕಟ್ಟೆ, ಬಜತ್ತೂರು ಗ್ರಾ.ಪಂ.ಸದಸ್ಯ ಮಾಧವ ಪೂಜಾರಿ , ಗ್ರಾಮಸ್ಥರಾದ ಶಶಿಧರ ಮುದ್ಯ, ಧನಂಜಯ ಗೌಡ ಬಾರಿಕೆ, ಸೋಮಸುಂದರ ಕೊಡಿಪಾನ, ಸದಾನಂದ ಶಿಬಾರ್ಲ, ಗೋಪಾಲ ಪೂಜಾರಿ ಅರ್ಬಿ, ತುಳುನಾಡ ತುಡರ್ ಗ್ರೂಪಿನ ಸದಸ್ಯರಾದ ಮನೋಜ್ ಕುಮಾರ್ ಮಣಿಕ್ಕಳ, ದಯಾನಂದ ಆರಾಲುತೋಟ, ರಮೇಶ್ ಮಂಜಿಪಲ್ಲ, ಮಮತಾ ಆಲಾಜೆ, ಸುಜಾತ ರೆಂಜಾಲ, ಜಗದೀಶ್ ಶಿಬಾರ್ಲ, ಭವ್ಯ ಪಂಜಳ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಗ್ರೂಪಿನ ಉಪಾಧ್ಯಕ್ಷೆ ಮಮತಾ ಆಲಾಜೆ 2024ನೇ ಸಾಲಿನ ವರದಿ ಮಂಡನೆ ಮಾಡಿದರು. ಗ್ರೂಪಿನ ಅಧ್ಯಕ್ಷ ಮನೋಜ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರೂಪ್‍ನ ಸದಸ್ಯೆ ಸುಜಾತ ರೆಂಜಾಳ ವಂದಿಸಿದರು.

ಗೌರವಾರ್ಪಣೆ:
ಪ್ರಶಾಂತ್ ಸಾಲಿಯಾನ್‍ರವರು ಕಿಟ್ ವಿತರಣೆಗಾಗಿ 55,555 ರೂ. ದೇಣಿಗೆಯಾಗಿ ನೀಡಿದ ಗ್ರೂಪ್‍ನ ಸದಸ್ಯ ಪ್ರಶಾಂತ್ ಸಾಲಿಯಾನ್ ಅವರ ಪರವಾಗಿ ಅವರ ತಂದೆ ಗೋಪಾಲ ಪೂಜಾರಿ ಅರ್ಬಿ ಅವರಿಗೆ ಸಮಾರಂಭದಲ್ಲಿ ಫಲಪುಷ್ಪ ನೀಡಿ ಗೌರವಿಸಲಾಯಿತು.

Leave a Reply

error: Content is protected !!