ಹಳೆನೇರೆಂಕಿ: ಉಚಿತ ದಂತ ಚಿಕಿತ್ಸಾ ಶಿಬಿರ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಗೋಳಿತ್ತೊಟ್ಟು ವಲಯದ ಹಳೆನೇರೆಂಕಿ ಜ್ಞಾನವಿಕಾಸ ಮಹಿಳಾ ಕೇಂದ್ರ, ಲಯನ್ಸ್ ಕ್ಲಬ್ ದುರ್ಗಾಂಬ ಆಲಂಕಾರು, ಹಳೆನೇರೆಂಕಿ ಸರ್ಕಾರಿ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘ, ಹಳೆನೇರಂಕಿ ಗ್ರಾಮ ವಿಕಾಸ ಸಮಿತಿ ಆಶ್ರಯದಲ್ಲಿ ಸುಳ್ಯ ಕೆವಿಜಿ ಮಹಾ ವಿದ್ಯಾಲಯ ಆಸ್ಪತ್ರೆಯ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಹಳೆನೇರೆಂಕಿ ಸರ್ಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.

ಶಾಲಾ ಮುಖ್ಯಶಿಕ್ಷಕ ಸಾಂತಪ್ಪ ಗೌಡ ಉದ್ಘಾಟಿಸಿ ಶುಭ ಹಾರೈಸಿದರು. ಆಲಂಕಾರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಕದ್ರ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ, ಕೆವಿಜಿ ಆಸ್ಪತ್ರೆಯ ವೈದ್ಯ ತುಫೈಲ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷೆ ಸವಿತಾ ಶುಭ ಹಾರೈಸಿದರು.

ಹಳೇನೇರೆಂಕಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜಯಶ್ರೀ, ವಲಯದ ಸೇವಾ ಪ್ರತಿನಿಧಿಗಳಾದ ಹೇಮಲತಾ, ಪ್ರತಿಮಾ, ಪ್ರೇಮಲತಾ, ಸುಮಲತಾ, ವಿಶಾಲಾಕ್ಷಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೊಸದಾಗಿ ರಚನೆಯಾಗಿರುವ ಜ್ಞಾನ ವಿಕಾಸ ಕೇಂದ್ರದ ದಾಖಲಾತಿಯನ್ನು ನಿಕಟಪೂರ್ವ ವಲಯಧ್ಯಕ್ಷ ವೀರೇಂದ್ರ ಅವರು ಸಂಯೋಜಕಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು. ಸುಳ್ಯ ಕೆವಿಜಿ ಮಹಾ ವಿದ್ಯಾಲಯ ಆಸ್ಪತ್ರೆಯ ಸಿಬ್ಬಂದಿ ಜಯಂತ್ ಪ್ರಸ್ತಾವಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಮಹೇಶ್ ಸ್ವಾಗತಿಸಿದರು. ಯೋಜನೆಯ ವಲಯ ಮೇಲ್ವಿಚಾರಕಿ ಜಯಶ್ರೀ ನಿರೂಪಿಸಿದರು. ಗೋಳಿತ್ತೊಟ್ಟು ವಲಯದ ನಿಕಟಪೂರ್ವ ವಲಯ ಅಧ್ಯಕ್ಷ ವೀರೇಂದ್ರ ವಂದಿಸಿದರು.

Leave a Reply

error: Content is protected !!