ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ತಂಡ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ

ಶೇರ್ ಮಾಡಿ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ದ್ವೈವಾರ್ಷಿಕ ಮಾತೃ ವೇದಿಕೆ ಕ್ರೀಡಾಕೂಟದಲ್ಲಿ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ತಂಡವು ನೇರ ಸೆಟ್‌ಗಳಿಂದ ಬಟ್ಯಾಲ್ ಸೆಂಟ್ ಮೇರಿಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದಿತು. ಉಪಾಂತ್ಯ ಪಂದ್ಯದಲ್ಲಿ ಪ್ರಬಲ ಬಜಗೋಳಿ ಸೆಂಟ್ ಥೋಮಸ್ ತಂಡವನ್ನು ಮೆಟ್ಟಿ ನಿಂತು ಜಯ ಸಾಧಿಸಲಾಯಿತು.

ಈ ಕ್ರೀಡಾಕೂಟದಲ್ಲಿ ಸ್ಕಿಟ್, ಸಾಂಪ್ರದಾಯಿಕ ಸೀರೋ ಮಲಬಾರ್ ಕ್ರೈಸ್ತರ ಕಲೆ ಮಾರ್ಗಮ್ ಕಳಿ ಮತ್ತು ಥ್ರೋ ಬಾಲ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಸ್ಕಿಟ್ ಮತ್ತು ಥ್ರೋಬಾಲ್‌ನಲ್ಲಿ ಧರ್ಮಸ್ಥಳ ತಂಡವು ಪ್ರಥಮ ಸ್ಥಾನ ಗಳಿಸಿತು ಮತ್ತು ಮಾರ್ಗಮ್ ಕಳಿಯಲ್ಲಿ ತೋಟತ್ತಾಡಿ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು.

ಮೂರು ಹಂತಗಳಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ಐವತ್ತಕ್ಕೂ ಹೆಚ್ಚು ಚರ್ಚ್‌ಗಳು ಭಾಗವಹಿಸಿದವು.

Leave a Reply

error: Content is protected !!