ನಮ್ಮ ಸುತ್ತಮುತ್ತ ಪ್ರತಿನಿತ್ಯ ಹಲವಾರು ಆಘಾತಕಾರಿ ಮತ್ತು ಆಶ್ಚರ್ಯಕರ ಘಟನೆಗಳು ನಡೆಯುತ್ತವೆ. ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗುತ್ತಿರುವುದನ್ನು ನೋಡುತ್ತೇವೆ. ಅಂತಹದೆ ಅಪೂರೂಪದ ಘಟನೆಯೊಂದು ಮಧ್ಯಪ್ರದೇಶದ ಶಾಹದೋಲ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬಳು ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವಿಶೇಷ ಅಂದರೆ ಎರಡು ದೇಹಕ್ಕೆ ಒಂದೇ ಹೃದಯ, ಕಿಡ್ನಿ ಮತ್ತು ಲಿವರ್ ಇದೆ. ಇದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚು ಅಪಾಯಕಾರಿ ಎಂದು ತಜ್ಱರು ಸೂಚಿಸುತ್ತಿದ್ದಾರೆ.
ರವಿ ಜೋಗಿ ಮತ್ತು ವರ್ಷಾ ಜೋಗಿ ದಂಪತಿ ಅನುಪ್ಪುರ್ ಜಿಲ್ಲೆಯ ಕೋಟ್ಮಾದಲ್ಲಿ ವಾಸಿಸುತ್ತಾರೆ. ವರ್ಷಾ ಜೋಗಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರು ಶಾಹದೋಲ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾದರು. ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಶಾಹದೋಲ್ ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಡಾ.ನಾಗೇಂದ್ರ ಸಿಂಗ್ ಅವರ ಪ್ರಕಾರ ಈ ಅವಳಿ ಮಕ್ಕಳು ಎದೆಯ ಭಾಗದಲ್ಲಿ ಸೇರಿಕೊಂಡು ಒಂದೇ ಹೃದಯವನ್ನು ಹೊಂದಿವೆ. ಹಾಗಾಗಿ ಅವರನ್ನು ಎಸ್ಎನ್ಸಿಯು ವಾರ್ಡ್ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಇಂತಹ ಅಸಾಧಾರಣ ಪ್ರಕರಣಗಳು ಅಪರೂಪ. ಈ ಜನನ ನಮಗೂ ಕೊಂಚ ಆತಂಕ ಇದೆ. ಅಲ್ಲದೇ ಅಸಾಧಾರಣ ಅವಳಿ ಮಕ್ಕಳ ಜನನದಿಂದ ಕುಟುಂಬಸ್ಥರು ಸಹ ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳ ದೇಹದಲ್ಲಿನ ಭಾಗಗಳು ಹಂಚಿ ಹೋಗಿವೆ ಮತ್ತು ಭ್ರೂಣ ಇನ್ನೂ ಸರಿಯಾಗಿ ಬೆಳದಿಲ್ಲದ ಕಾರಣ ಅವರ ವಿಭಜನೆ ಮಾಡುವುದು ಕಷ್ಟಕರ. ಇದರ ಕುರಿತು ಇನ್ನು ಹೆಚ್ಚಿನ ಪರೀಕ್ಷೆ ಮಾಡುತ್ತೇವೆ ಎಂದು ಡಾ. ಸಿಂಗ್ ದೃಢಪಡಿಸಿದ್ದಾರೆ.
ಸಂಯೋಜಿತ ಅವಳಿ ಮಕ್ಕಳ ಜೀವಿತಾವಧಿ ತೀರಾ ಕಡಿಮೆ. ಇಂತಹ ನೂರು ಪ್ರಕರಣಗಳಲ್ಲಿ ಒಂದು ಅಥವಾ ಎರಡು ಮಕ್ಕಳು ಮಾತ್ರ ಬದುಕುಳಿಯುತ್ತವೆ.