ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿ ವಿದ್ಯಾರ್ಥಿಯ ಹಲ್ಲು ಮುರಿಯುವ ಹಾಗೆ ಹೊಡೆದಿದ್ದಾರೆ. ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಅಶ್ವಿನ್ ಎಂಬ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದನು. ಇದರಿಂದ ಕೋಪಗೊಂಡ ಹಿಂದಿ ವಿಷಯ ಶಿಕ್ಷಕಿ ಅಜ್ಮತ್ ವಿದ್ಯಾರ್ಥಿ ಅಶ್ವಿನ್ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಅಶ್ವಿನ್ನ ಹಲ್ಲು ಮುರಿದಿದೆ.
ವಿದ್ಯಾರ್ಥಿ ಅಶ್ವಿನ್ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ವಿದ್ಯಾರ್ಥಿ ಅಶ್ವಿನ್ ತಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕಿ ಅಜ್ಮತ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಿಕ್ಷಕಿ ಅಜ್ಮತ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಅಶ್ವಿನ್ ಪೋಷಕರು ಶಿಕ್ಷಕಿ ಅಜ್ಮತ್ಗೆ ನೋಟಿಸ್ ನೀಡಿದ್ದಾರೆ.