ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

ಶೇರ್ ಮಾಡಿ

ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ನ.8ರ ಬೆಳಗ್ಗಿನ ಜಾವ ನಡೆದ ಬೈಕ್‌ ಮತ್ತು ಲಾರಿ ಅಪಘಾತದಲ್ಲಿ ಇಂದಬೆಟ್ಟುವಿನ ವಸಂತ ಗೌಡ ಅವರ ಪುತ್ರ ತುಷಾರ್‌ ಗೌಡ (22) ಸಾವನ್ನಪ್ಪಿದ್ದಾರೆ.

ಅವರು ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿಯಾಗಿದ್ದರು. ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬೈಕ್‌ನಲ್ಲಿದ್ದ ಸಹಸವಾರ ಬೆಳಾಲಿನ ಸೃಜನ್‌ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.

ಪ್ರಕರಣ ಸಂಬಂಧ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ ಟ್ರಾಫಿಕ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

error: Content is protected !!