ನೆಲ್ಯಾಡಿ: ಪುಚ್ಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನೆಲ್ಯಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಎರಡೂ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಕಿರಿಯ ವಿಭಾಗದಲ್ಲಿ : ನತಾಷ ಜಿನ್ಸ್ ಕಥೆ ಹೇಳುವುದು -ಪ್ರಥಮ , ಇಂಗ್ಲೀಷ್ ಕಂಠ ಪಾಠ-ತೃತೀಯ, ಶ್ರೀಶಾ ಗೌಡ ಅಭಿನಯಗೀತೆ-ಪ್ರಥಮ, ಆದ್ಯಾ.ಜಿ.ಕೆ ಛದ್ಮವೇಷ-ಪ್ರಥಮ, ತೃಪ್ತಿ.ಬಿ ಆಶುಭಾಷಣ – ಪ್ರಥಮ, ನೈನಿಕ.ಎಂ.ಎಸ್ ಭಕ್ತಿ ಗೀತೆ-ದ್ವಿತೀಯ, ಅಕ್ಷರ ಧಾರ್ಮಿಕ ಪಠಣ ಸಂಸ್ಕೃತ-ದ್ವಿತೀಯ,ಆಯಿಷತುಲ್ ರಿಫಾ ಚಿತ್ರಕಲೆ-ತೃತೀಯ
ಹಿರಿಯ ವಿಭಾಗದಲ್ಲಿ: ಅಭಿನವ್ ಪ್ರಸಾದ್ ಕ್ಲೇ ಮಾಡೆಲಿಂಗ್ -ಪ್ರಥಮ, ಶ್ರಧ್ಧಾ.ಕೆ. ಹಿಂದಿ ಕಂಠಪಾಠ -ಪ್ರಥಮ, ಜಿತ್ನಾ ಎಂ.ಜೆ. ಇಂಗ್ಲೀಷ್ ಕಂಠಪಾಠ -ಪ್ರಥಮ, ಅವನಿ.ಕೆ ಆಶುಭಾಷಣ -ದ್ವಿತೀಯ,ಕಥೆ ಹೇಳುವುದು -ದ್ವಿತೀಯ, ಅನ್ಷಿ ಅಭಿನಯ ಗೀತೆ -ದ್ವಿತೀಯ, ಶ್ರೇಯಾ.ಎಸ್ ನಾಯಕ್ ದೇಶಭಕ್ತಿ ಗೀತೆ -ದ್ವಿತೀಯ, ಸೃಷ್ಠಿ ಪಿ.ಎಸ್ ಕನ್ನಡ ಕಂಠಪಾಠ -ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.
ವಿಜೇತ ವಿದ್ಯಾರ್ಥಿಗಳಿಗೆ, ತರಬೇತುಗೊಳಿಸಿದ ಶಿಕ್ಷಕ ವೃಂದಕ್ಕೆ, ಸಹಕರಿಸಿದ ಪೋಷಕರಿಗೂ ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಅಭಿನಂದಿಸಿದರು.