ಕೊಕ್ಕಡ : ಸೌತಡ್ಕ ಸೇವಾಧಾಮ, ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ನ ವಿದ್ಯಾರ್ಥಿಗಳು ಕೇಂದ್ರದ ಸನಿವಾಸಿಗಳಿಗೆ ಹಾಗೂ ಆರೈಕೆದಾರರಿಗೆ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಮಹತ್ವವನ್ನು ತಿಳಿಸಿ, ವಿವಿಧ ಆಸನಗಳ ಯೋಗಾಭ್ಯಾಸವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ 9ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, 9 ಮಂದಿ ಆರೈಕೆದಾರರು ಭಾಗವಹಿಸಿದ್ದರು. ಪುನಶ್ಚೇತನ ಕೇಂದ್ರದ ಅಸಿಸ್ಟೆಂಟ್ ಫಿಸಿಯೋಥೆರಪಿಸ್ಟ್ ಕೃತಿಕಾ ಹಾಗೂ ಪೀರ್ ಟ್ರೈನರ್ ಆಂಟೋನಿ ಉಪಸ್ಥಿತರಿದ್ದರು.