ಕೊಕ್ಕಡ ಶ್ರೀರಾಮ‌ ಸೇವಾ ಮಂದಿರಕ್ಕೆ ಅಡುಗೆ ಪಾತ್ರೆ, ಸಾಮಾಗ್ರಿಗಳ ಕೊಡುಗೆ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ಇದರ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀ ರಾಮ ಸೇವಾ ಮಂದಿರಕ್ಕೆ ಕಡಿಮೆ ಖರ್ಚು & ವೆಚ್ಚಗಳಲ್ಲಿ ಸುಸೂತ್ರವಾಗಿ ಸಭೆ ಸಮಾರಂಭಗಳನ್ನು ನಡೆಯಲು ಅಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಅರಿತು ದಾನಿಗಳ ಬಳಿ ಮನವಿಯನ್ನು ಮಾಡಿದಾಗ ಸುಮಾರು 500 ಜನರಿಗೆ ಬೇಕಾಗುವ ರೂ. 1 ಲಕ್ಷ ಮೌಲ್ಯದ ಅಡುಗೆ ಪಾತ್ರೆಗಳನ್ನು ನಿವೃತ್ತ ಅಧ್ಯಾಪಕರಾದ ಕುಂಞಪ್ಪ ಗೌಡ ಪೂವಾಜೆ ಕೊಲ್ಲಾಜೆಪಳಿಕೆ, ಗ್ಯಾಸ್ ಸ್ಟವ್ ನ್ನು ನಿವೃತ್ತ ಅಧ್ಯಾಪಕ ಬಜ ಗಣೇಶ್ ಐತಾಳ್, ಬಾವಿಗೆ ರಕ್ಷಾ ಕವಚವನ್ನು ಸಚಿನ್ ಸಾಲಿಯಾನ್ ವೈನ್ಸ್ , ಊಟದ ತಟ್ಟೆಗಳನ್ನು ಮೆಸ್ಕಾಂ ಸಿಬ್ಬಂದಿಗಳು, ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಇಲ್ಲಿಯ ಸಿಬ್ಬಂದಿಗಳು, ಗೊದ್ರೇಜ್ ನ್ನು ಹಿಂದೂ ಶಕ್ತಿ ಆಟೋ ಚಾಲಕ, ಮಾಲಕರ ಸಂಘದ ವತಿಯಿಂದ, ಸಿಂಗಲ್ ಬರ್ನರ್ ಸ್ಟವ್ ನ್ನು ಶ್ರೀನಾಥ್ ಬಡೆಕೈಲು ಪ್ರಕೃತಿ ಇಂಜಿನಿಯರಿಂಗ್ ವರ್ಕ್ಸ್‌, ಮಿಕ್ಸರ್ ಗ್ರೈಂಡರನ್ನು ಹೇಮಂತ್ ಕುಮಾರ್ ಶ್ರೀದುರ್ಗಾಪರಮೇಶ್ವರಿ ಫ್ಲವರ್ ಸ್ಟಾಲ್ ಕೊಕ್ಕಡ, ಗ್ರೈಂಡರನ್ನು ಅಶೋಕ್ ಭಿಡೆ ಪಾಕತಜ್ಞರು ನೀಡಿರುತ್ತಾರೆ ಹಾಗೂ ಕೆಲವು ವೈಯಕ್ತಿಕ ದಾನಿಗಳಿಂದ ಶ್ರೀ ರಾಮ ಸೇವಾ ಮಂದಿರಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿರುತ್ತಾರೆ.

ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ಅವರು ಶ್ರೀ ದೇವರಲ್ಲಿ ಪ್ರಾರ್ಥಿಸಿ ದಾನಿಗಳು ನೀಡಿರುವ ವಸ್ತುಗಳನ್ನು ಶ್ರೀರಾಮ ಸೇವಾ ಟ್ರಸ್ಟ್ ಗೆ ಹಸ್ತಾಂತರಿಸಲಾಯಿತು. ಈ ವೇಳೆ ದಾನಿಗಳಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ದಾನಿಗಳಾದ ಕುಂಞಪ್ಪ ಗೌಡ ಪೂವಾಜೆ ಕೊಲ್ಲಾಜೆಪಳಿಕೆ ದಂಪತಿಗಳು, ಗಣೇಶ್ ಐತಾಳ್ ಬಜ, ಅಶೋಕ್ ಭಿಡೆ, ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ, ಈಶ್ವರ ಭಟ್ ಹಿತ್ತಿಲು, ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಟ್ರಸ್ಟ್ ನ ಕೋಶಾಧಿಕಾರಿ ಪಣಿರಾಜ್ ಜೈನ್ ಕೊಕ್ಕಡ, ವಿ.ಹಿಂ.ಪ ಅಧ್ಯಕ್ಷರಾದ ಪುರುಷೋತ್ತಮ ಕೆ ಕೊಕ್ಕಡ, ಡಾ.ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ಡಾ.ಮೋಹನ್ ದಾಸ್ ಗೌಡ ಹಿರಿಯ ವೈದ್ಯರು ಕೊಕ್ಕಡ, ಶಾಂತಪ್ಪ ಮಡಿವಾಳ ಕೊಕ್ಕಡ, ಪುರಂದರ ಕಡೀರ ಹಾಗೂ ಶ್ರೀ ರಾಮ ಸೇವಾ ಟ್ರಸ್ಟ್ ನ ಮತ್ತು ನಗರ ಭಜನಾ ಸಪ್ತಾಹದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!