ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಶೇರ್ ಮಾಡಿ

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ನ.16ರಂದು ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಬಾಣಜಾಲು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಕ್ರೀಡೆಗಳಿಂದ ವಿದ್ಯಾರ್ಥಿಗಳ ಜೀವನ ಬೆಳಗಬೇಕೆಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಫಾ.ವರ್ಗೀಸ್ ಕೈಪನಡ್ಕ ವಹಿಸಿದರು. ಸಂಸ್ಥೆಯ ಸಂಚಾಲಕರಾದ ಫಾ.ಜೈಸನ್ ಸಾಮುವೆಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಿಸ್ಸಾರ್ ಅವರು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ, ವಾಯು, ಭೂಮಿ ಮತ್ತು ಜಲ ಹೆಸರಿನಲ್ಲಿ ಗುಂಪುಗಳನ್ನು ರಚನೆ ಮಾಡಲಾಗಿತ್ತು. ಪ್ರಾಥಮಿಕ ವಿಭಾಗದಿಂದ ಕೌಶಿಕ್, ಬಾಲಕಿಯರ ವಿಭಾಗದಿಂದ ವಂಶಿಲ್ ಮತ್ತು ನೂಹಾ, ಪ್ರೌಢಶಾಲಾ ಬಾಲಕರ ವಿಭಾಗದಿಂದ ಆದಿತ್ಯ ಬಾಲಕಿಯರ ವಿಭಾಗದಿಂದ, ಪಿಯು ವಿಭಾಗದಿಂದ ಪ್ರಿಯ ವಿಕಾಸ್ ಮತ್ತು ಅಲೆನ್ ಶಿಜು ಬಾಲಕಿಯರ ವಿಭಾಗದಲ್ಲಿ ಜೆಸ್ಲಿ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಫಾ.ವರ್ಗೀಸ್ ಕೈಪನಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್ ಉಪಸ್ಥಿತರಿದ್ದರು.

ಕ್ರೀಡಾಕೂಟದ ಉದ್ಘೋಷಣೆಯನ್ನು ಶಿಕ್ಷಕಿ ವೆರೋನಿಕ ಹಾಗೂ ಶಿಕ್ಷಕಿ ದೀಪ ನೆರವೇರಿಸಿದರು. ದೈಹಿಕ ಶಿಕ್ಷಕರಾದ ಅಲ್ಫೋನ್ಸ, ಸುಧಾಕರ್ ಹಾಗೂ ಮನೋಜ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಕುಮಾರಿ ಅಲ್ವಿನ ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ಆಲ್ಬ ಸ್ವಾಗತಿಸಿದರು, ರಿಸ್ಟನ್ ವಂದಿಸಿದರು.

Leave a Reply

error: Content is protected !!