ನೆಲ್ಯಾಡಿ ಯೇಸುವಿನ ದೇವಾಲಯದಲ್ಲಿ ಭಾನುವಾರ ದಂದು ಕಥೋಲಿಕ್ ಸಭಾ ಘಟಕ ಹಾಗೂ ಐ.ಸಿ.ವೈ.ಎಮ್ ಸಂಘದ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಚರ್ಚ್ ನ ಧರ್ಮಗುರುಗಳಾದ ವಂ.ಫಾ.ಗ್ರೇಶನ್ ಅಲ್ವಾರಿಸ್, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷತೋಮಸ್ ಡಿಸೋಜಾ, ಕಾರ್ಯದರ್ಶಿ ನಿಶ್ಮಿತಾ ಡಿಸೋಜಾ, ಸಂತ ಜೋಸೆಫ್ ಕಾನ್ವೆಂಟಿನ ಸುಪೀರಿಯರ್ ಸಿ.ತೆರೆಜಾ ಜೋನ್, ಸರ್ವ ಆಯೋಗದ ಸಂಚಾಲಕರಾದ ವಿಕ್ಟರ್ ಸ್ಟ್ರೆಲ್ಲಾ, ಐ.ಸಿ.ವೈ.ಎಮ್ ಅಧ್ಯಕ್ಷೆ ಹರ್ಷಿತಾ ಡಿಸೋಜಾ, ಕಥೋಲಿಕ್ ಸಭಾದ ಅಧ್ಯಕ್ಷ ಪ್ರೀತಮ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಗುರುಗಳು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಮಹತ್ವ ಹಾಗೂ ಜೀವನದಲ್ಲಿ ಯಶಸ್ಸು ಗಳಿಸಲು ಶಿಕ್ವಣ, ಪ್ರಾರ್ಥನೆ ಹಾಗೂ ಶಿಸ್ತು ಮುಖ್ಯವಾದುದು ಎಂದು ತಿಳಿಸಿದರು.
ಚರ್ಚ್ ನಲ್ಲಿ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗೌರವಿಸಲಾಯಿತು. ಐ.ಸಿ.ವೈ.ಎಮ್ ಅಧ್ಯಕ್ಷೆ ಹರ್ಷಿತಾ ಡಿಸೋಜಾ ಸ್ವಾಗತಿಸಿದರು. ಪ್ರೀತಮ್ ಡಿಸೋಜಾ ವಂದಿಸಿದರು. ವಿನೀತಾ ಡಿಸೋಜಾ ನಿರೂಪಿಸಿದರು.
ಮಕ್ಕಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಅವರಿಗೆ ವಿವಿಧ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು.