ರಾಜ್ಯ ಸರಕಾರ ನೌಕರ ಸಂಘದ ಕಡಬ ತಾಲೂಕು ಶಾಖೆ ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ

ಅಧ್ಯಕ್ಷರಾಗಿ ವಿಮಲ್ ಕುಮಾರ್, ರಾಜ್ಯ ಪರಿಷತ್ ಸದಸ್ಯರಾಗಿ ಯಶ್ ರಾಜ್ ಆಯ್ಕೆ, ಕೋಶಾಧಿಕಾರಿಯಾಗಿ ಶೇಷಾದ್ರಿ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ವಿಮಲ್ ಕುಮಾರ್ ನೆಲ್ಯಾಡಿ, ಯಶ್ ರಾಜ್ ಅವರು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಕೋಶಾಧಿಕಾರಿಯಾಗಿ ಅವಿರೋಧವಾಗಿ ಶೇಷಾದ್ರಿ ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ವಿಮಲ್ ಕುಮಾರ್ ನೆಲ್ಯಾಡಿ ಹಾಗೂ ರಾಮಕೃಷ್ಣ ಮಲ್ಲಾರ ಅವರು ಸ್ಪರ್ಧಿಸಿದ್ದು 13ಮತ ಪಡೆದ ವಿಮಲ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ರಾಮಕೃಷ್ಣ ಮಲ್ಲಾರ ಅವರು 8 ಮತಗಳನ್ನು ಪಡೆದಿದ್ದಾರೆ. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಯಶ್ ರಾಜ್ ಹಾಗೂ ನಿಂಗರಾಜು ಅವರು ಸ್ಪರ್ಧಿಸಿದ್ದು ಯಶ್ ರಾಜ್ ಅವರು 15 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ನಿಂಗರಾಜು ಅವರು 6 ಮತಗಳನ್ನು ಪಡೆದುಕೊಂಡಿದ್ದಾರೆ. ಕೋಶಾಧಿಕಾರಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ ಅವರು ಆಯ್ಕೆಗೊಂಡರು. ಚುನಾವಣೆಯು ಕಡಬ ತಾಲೂಕು ಪಂಚಾಯಿತಿನಲ್ಲಿ ನಡೆಯಿತು. ಚುನಾವಣಾ ಅಧಿಕಾರಿಯಾಗಿ ನಿವೃತ್ತ ಪಿಡಿಓ ಜೆರಾಲ್ಡ್ ಮಸ್ಕರೇನಸ್ ಚುನಾವಣೆ ಅಧಿಕಾರಿಯಾಗಿದ್ದರು.

ಪಶುಪಾಲನ ಇಲಾಖೆಯ ದಿವಾಕರ, ಕಂದಾಯ ಇಲಾಖೆಯ 2ಸ್ಥಾನಗಳಿಗೆ ಶೇಷಾದ್ರಿ ಹಾಗೂ ಶೃತಿ, ಪ್ರಾಥಮಿಕ ಶಾಲೆಯ 4 ಸ್ಥಾನಗಳಿಗೆ ರಾಮಕೃಷ್ಣ ಮಲ್ಲಾರ, ದಿಲೀಪ್ ಕುಮಾರ್, ವಿಮಲ್ ಕುಮಾರ್, ನಿಂಗರಾಜು, ಪ್ರೌಢಶಾಲಾ ವಿಭಾಗದ 1ಸ್ಥಾನಕ್ಕೆ ಶ್ರೀಲತಾ, ಶಿಕ್ಷಣ ಇಲಾಖೆಯ ಆಡಳಿತ ಕಚೇರಿ ವಿಭಾಗದ ಒಂದು ಸ್ಥಾನಕ್ಕೆ ಅತುಲ್ ಭಟ್, ಪದವಿಪೂರ್ವ ಕಾಲೇಜು ವಿಭಾಗದ 1 ಸ್ಥಾನಕ್ಕೆ ವಾಸುದೇವ ಕೋಲ್ಪೆ, ಸಮಾಜ ಕಲ್ಯಾಣ ಇಲಾಖೆಯ ಒಂದು ಸ್ಥಾನಕ್ಕೆ ಲತೇಶ್ ಕುಮಾರ್, ಅರಣ್ಯ ಇಲಾಖೆಯ ಒಂದು ಸ್ಥಾನಕ್ಕೆ ಯೋಗೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 4 ಸ್ಥಾನಕ್ಕೆ ಮಾಲತಿ. ಎಂ.ಡಿ, ಯಶ್ ರಾಜ್, ಹರ್ಷಕುಮಾರ್, ಜಿನ್ಸಿ.ಪಿ.ಎ, ಖಜಾನೆ ಇಲಾಖೆಯ ಒಂದು ಸ್ಥಾನಕ್ಕೆ ಶಿವರಾಜ್.ಎಂ, ಗ್ರಾಮೀಣಾಭಿವೃದ್ಧಿ ಇಲಾಖೆಯ 2 ಸ್ಥಾನಗಳಿಗೆ ಸಂದೇಶ ಹಾಗೂ ಯಶವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಂದು ಸ್ಥಾನಕ್ಕೆ ಪುಷ್ಪಾವತಿ ಡಿ.ಎಂ, ಪಟ್ಟಣ ಪಂಚಾಯಿತಿ ನ 1 ಸ್ಥಾನಕ್ಕೆ ಹರೀಶ್ ಬೆದ್ರಾಜೆ, ಭೂಮಾಪನ ಇಲಾಖೆಯ 1 ಸ್ಥಾನಕ್ಕೆ ಗಿರಿ ಗೌಡ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

Leave a Reply

error: Content is protected !!