ನೆಲ್ಯಾಡಿ: ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಟ ಮತ್ತು ಕುಮಿಟೆ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಯಶ್ವಿನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಟ್ರೋಫಿಯನ್ನು ಪಡೆದಿರುತ್ತಾರೆ. ಬಾತಿಶ್ ಕಟಾ ವಿಬಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರಿಗೆ ತರಬೇತಿಯನ್ನು ಕರಾಟೆ ಮಾಸ್ಟರ್ ರೋಹಿತ್ ಅವರು ತರಬೇತಿ ನೀಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ತರಬೇತುದಾರರಿಗೆ ಸಂಸ್ಥೆಯ ನಿರ್ದೇಶಕರಾದ ಫಾ.ವಿಜೋಯ್ ವರ್ಗೀಸ್, ಪ್ರಾಂಶುಪಾಲರಾದ ಜಾರ್ಜ್.ಟಿ.ಎಸ್, ಮುಖ್ಯಶಿಕ್ಷಕರಾದ ಥೋಮಸ್.ಏ.ಕೆ, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರು ಅಭಿನಂದನೆ ಸಲ್ಲಿಸಿದರು.