ಧರ್ಮಸ್ಥಳ-ಸೌತಡ್ಕ-ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಚರಿಸುವ ರಸ್ತೆಯಲ್ಲಿ ಮರಣಗುಂಡಿಗಳು!

ಶೇರ್ ಮಾಡಿ

ಕುಸಿದ ಮೋರಿ..! ದಾರಿಯುವುದಕ್ಕೂ ಶಪಿಸಿಕೊಂಡೆ ಸಂಚರಿಸುವ ಯಾತ್ರಾತಿಗಳು..!

ನೆಲ್ಯಾಡಿ: ಪ್ರಯಾಣಿಸುವ ರಸ್ತೆಯೊಂದು ಹದಗೆಟ್ಟರೆ ನೇರವಾದ ಹೊಡೆತವನ್ನು ಎದುರಿಸುವವರು ಹಾಗೂ ಕಷ್ಟವನ್ನು ಪಡುವವರು ವಾಹನ ಸವಾರರು. ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಸಂಚರಿಸುವ ಈ ರಸ್ತೆಯಾಗಿದ್ದು. ದಕ್ಷಿಣ ಕನ್ನಡ ಅಲ್ಲದೆ ಹೊರ ರಾಜ್ಯಗಳಿಂದ ಭಕ್ತಾದಿಗಳಿಗೆ ಈ ರಸ್ತೆಯ ಸಂಚಾರ ದುಸ್ತರವಾಗಿದೆ.

ದಕ್ಷಿಣ ಕನ್ನಡದ ಅತ್ಯಂತ ಪ್ರಸಿದ್ಧ ಯಾತ್ರಕ್ಷೇತ್ರವಾದ ಧರ್ಮಸ್ಥಳದಿಂದ ಪೆರಿಯಶಾಂತಿಯಾಗಿ ಸುಬ್ರಮಣ್ಯಕ್ಕೆ ಪ್ರಯಾಣಿಸುವ ರಸ್ತೆ ಹೋಂಡಮಯವಾಗಿದ್ದು ದೇಶ ವಿದೇಶದಿಂದ ಆಗಮಿಸುವ ಭಕ್ತಾದಿಗಳು, ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳ ಪ್ರಯಾಣ ಅತ್ಯಂತ ತ್ರಾಸದಾಯಕವಾಗಿದೆ.

ಸುಬ್ರಹ್ಮಣ್ಯ – ಸೌತಡ್ಕ -ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾದಿಗಳು ಅತ್ಯಂತ ಶ್ರೀಮಂತ ದೇವಾಲಯ ಎನಿಸಿಕೊಂಡ ಕ್ಷೇತ್ರಕ್ಕೆ ತಲುಪಬೇಕಾದರೆ ತೀರಾ ಕಳಪೆಯಾದ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿದೆ. ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ವಾಹನ ಚಲಾಯಿಸುವುದೇ ಅಗ್ನಿಪರೀಕ್ಷೆಯಾಗಿ ಬಿಡುತ್ತದೆ.

ಧರ್ಮಸ್ಥಳ -ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಜಾತ್ರೆ ಆರಂಭ:
ಧರ್ಮಸ್ಥಳ ಹಾಗೂ ಸುಬ್ರಮಣ್ಯ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ಜಾತ್ರೆಗೆ ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಿರುವುದು.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು :
ಪ್ರತಿ ವರ್ಷ ಈ ರಸ್ತೆಗೆ ಡಾಮರಿನ ತೇಪೆ ಕೆಲಸ ಮಾಡಲಾಗುತ್ತದೆ, ಆದರೆ ರಸ್ತೆಯ ಎರಡು ಇಕ್ಕಲಗಳಲ್ಲಿ ಮರಗಳು ರಸ್ತೆಗೆ ಬಾಗಿದ್ದು, ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ, ಮಳೆಗೆ ಬಿದ್ದ ನೀರು ರಸ್ತೆಯಲ್ಲಿ ಹರಿಯುವುದು ಹಾಗೂ ಅತಿ ಹೆಚ್ಚು ವಾಹನಗಳು ಪ್ರಯಾಣಿಸುವುದರಿಂದ ವರುಷ ಪೂರೈಸುವುದರೊಳಗಾಗಿ ಡಾಮಾರು ಮಂಗಮಾಯವಾಗಿ ಹೊಂಡಗಳು ರೂಪುಗೊಳ್ಳುತ್ತವೆ.

ಕುಸಿದ ಮೋರಿ:
ಕೊಕ್ಕಡ-ಪೆರಿಯಶಾಂತಿ ರಸ್ತೆ ಮಧ್ಯೆ ದಡ್ಡಲಪಳಿಕೆ ಎಂಬಲ್ಲಿ ಮೋರಿಯನ್ನು ಅಳವಡಿಸಿ ರಸ್ತೆಯನ್ನು ಅಗಲ ಮಾಡಲಾಗಿತ್ತು. ಇತ್ತೀಚೆಗೆ ವಿಪರೀತ ಮಳೆಯಿಂದಾಗಿ ಮೋರಿಗೆ ಕಟ್ಟಲಾಗಿದ್ದ ತಡೆಗೋಡೆ ಕುಸಿದಿದ್ದು. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ.ಯಾವುದೇ ಕ್ಷಣಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ

613.65 ಕೋಟಿ ರೂ ವೆಚ್ಚದ ಯೋಜನೆ:
ಉಜಿರೆಯಿಂದ ಧರ್ಮಸ್ಥಳ ವರೆಗೆ ಚತುಷ್ಪದ ರಸ್ತೆ ಹಾಗೂ ಧರ್ಮಸ್ಥಳದಿಂದ ಕೊಕ್ಕಡ ಮೂಲಕ ಪೆರಿಯಶಾಂತಿಯವರೆಗೆ 10ಮೀ ಅಗಲದ ದ್ವಿಪದ ರಸ್ತೆಯಾಗಿ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರಕಾರ 613.65 ಕೋಟಿ ರೂ ಮೊತ್ತಕ್ಕೆ ಮಂಜೂರಾತಿ ನೀಡಿದೆ. ಯೋಜನೆಗೆ ಫೆ.22ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿಲನ್ಯಾಸ ನೆರವೇರಿಸಿದ್ದರು. ಆದರೆ ಪೆರಿಯಶಾಂತಿಯಿಂದ ಸುಬ್ರಹ್ಮಣ್ಯದವರೆಗೆ ಈ ಯೋಜನೆ ವಿಸ್ತರಿಸದೇ ಇರುವುದು ಅತ್ಯಂತ ದೊಡ್ಡ ವಿಪರ್ಯಾಸವಾಗಿದೆ.

ಅತ್ಯಂತ ಪ್ರಸಿದ್ಧವಾದ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕಕ್ಕೆ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಭಕ್ತಾದಿಗಳು ಬರುತ್ತಿದ್ದು ಕ್ಷೇತ್ರಕ್ಕೆ ಸಂಚರಿಸುವ ರಸ್ತೆಯು ಅಲ್ಲಲ್ಲಿ ದೊಡ್ಡ ದೊಡ್ಡದಾದ ಮರಣಗುಂಡಿಗಳು ನಿರ್ಮಾಣಗೊಂಡಿವೆ. ಸಾಲ ಮಾಡಿ ವಾಹನ ಖರೀದಿಸಿದವರು, ದಿನದ ಬಾಡಿಗೆ ಮಾಡಿ ಜೀವನ ಸಾಗಿಸುವವರು ಈ ರಸ್ತೆಯಲ್ಲಿ ಸಂಚರಿಸಿದರೇ ಅವರು ಬಾಡಿಗೆಯಲ್ಲಿ ಗಳಿಸಿದ ಹಣ ವಾಹನದ ದುರಸ್ತಿಗೆ ವಿನಿಯೋಗಿಸುವ ದುಸ್ಥಿತಿ ಬಂದಿದೆ. ಆದಷ್ಟು ಬೇಗ ಈ ರಸ್ತೆಗೆ ಶಾಶ್ವತ ಪರಿಹಾರ ಸಿಗಬೇಕಾಗಿದೆ.
-ದಿವ್ಯೇಶ್ ಗೌಡ ಕಲ್ಯ ಇಚ್ಲಂಪಾಡಿ

Leave a Reply

error: Content is protected !!