ನೆಲ್ಯಾಡಿ: ಪಡುಬೆಟ್ಟು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಇಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
ಕ್ರೀಡಾಕೂಟವನ್ನು ಡಾಕಯ್ಯಗೌಡ, ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಬೀದಿಮಜಲು ಅವರು ವಹಿಸಿದ್ದರು. ವೇದಿಕೆಯಲ್ಲಿ ಕುಶಾಲಪ್ಪ.ಜಿ. ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಪಡುಬೆಟ್ಟು, ಸಲಾಂ ಬಿಲಾಲ್ ಅಧ್ಯಕ್ಷರು ಗ್ರಾ.ಪಂ.ನೆಲ್ಯಾಡಿ, ರವಿಚಂದ್ರ ಪಡುಬೆಟ್ಟು ಅಧ್ಯಕ್ಷರು ಪೂರ್ವ ವಿದ್ಯಾರ್ಥಿ ಸಂಘ ಪಡುಬೆಟ್ಟು, ಸುರೇಶ್ ಪಡಿಪಂಡ, ಅಧ್ಯಕ್ಷರು ವಾರ್ಷಿಕೋತ್ಸವ ಸಮಿತಿ ಪಡುಬೆಟ್ಟು, ಲೀಲಾವತಿ.ಎಂ. ದೈಹಿಕ ಶಿಕ್ಷಣ ಶಿಕ್ಷಕಿ ಪಡುಬೆಟ್ಟುಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ರವಿಚಂದ್ರ ಪಡಬೆಟ್ಟು ಸ್ವಾಗತಿಸಿದರು., ಲೀಲಾವತಿ.ಎಂ ವಂದಿಸಿದರು, ಶೀನಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಾರ್ಷಿಕೋತ್ಸವ ಸಮಿತಿ ಸದಸ್ಯರು, ಪೂರ್ವ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಊರ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.