ಮಂಗಳೂರು – ಬಜಪೆ ರಾಜ್ಯ ಹೆದ್ದಾರಿ 67ರ ಮರವೂರು ಸೇತುವೆಯಲ್ಲಿ ಮಂಗಳೂರು ಕಡೆಯಿಂದ ಬಂದ ಕಾರೊಂದು ಸೇತುವೆಯ ಅವೈಜ್ಞಾನಿಕ ಮಾರ್ಗಸೂಚಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಯ ತಪ್ಪಿ ದನವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು ಅಪಘಾತಕ್ಕೊಳಗಾದ ದನ ಮೃತಪಟ್ಟಿದೆ.
ಮರವೂರಿನಲ್ಲಿರುವ ಎರಡು ಸೇತುವೆಗಳ ಪೈಕಿ ಒಂದರಲ್ಲಿ ಸಂಚಾರ ನಿಷೇಧಿಸಲಾಗಿದ್ದು ಸಂಚಾರದ ಮಾರ್ಗಸೂಚಿ ತೀರಾ ಗೊಂದಲಕಾರಿಯಾಗಿದ್ದು ಕಾಮಗಾರಿ ಕೂಡಾ ಅವೈಜ್ಞಾನಿಕವಾಗಿರುವುದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಸ್ಥಳೀಯರ ಆರೋಪ. ಅಪಘಾತಕ್ಕೊಳಗಾದ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಕಾರು ಜಖಂಗೊಂಡಿರುತ್ತವೆ.
ಮಂಗಳೂರು – ಬಜಪೆ ರಾಜ್ಯ ಹೆದ್ದಾರಿ 67ರ ಮರವೂರು ಸೇತುವೆಯಲ್ಲಿ ಮಂಗಳೂರು ಕಡೆಯಿಂದ ಬಂದ ಕಾರೊಂದು ಸೇತುವೆಯ ಅವೈಜ್ಞಾನಿಕ ಮಾರ್ಗಸೂಚಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಯ ತಪ್ಪಿ ದನವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು ಅಪಘಾತಕ್ಕೊಳಗಾದ ದನ ಮೃತಪಟ್ಟಿದೆ.
ಮರವೂರಿನಲ್ಲಿರುವ ಎರಡು ಸೇತುವೆಗಳ ಪೈಕಿ ಒಂದರಲ್ಲಿ ಸಂಚಾರ ನಿಷೇಧಿಸಲಾಗಿದ್ದು ಸಂಚಾರದ ಮಾರ್ಗಸೂಚಿ ತೀರಾ ಗೊಂದಲಕಾರಿಯಾಗಿದ್ದು ಕಾಮಗಾರಿ ಕೂಡಾ ಅವೈಜ್ಞಾನಿಕವಾಗಿರುವುದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಸ್ಥಳೀಯರ ಆರೋಪ.
ಅಪಘಾತಕ್ಕೊಳಗಾದ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಕಾರು ಜಖಂಗೊಂಡಿರುತ್ತವೆ.