ನೇಸರ ಮಾ.02 ನೆಲ್ಯಾಡಿಯಲ್ಲಿ ನೂತನವಾಗಿ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಾಣಗೊಂಡ ಗ್ರಂಥಾಲಯದ ಉದ್ಘಾಟನೆ, ನರೇಗಾ ಯೋಜನೆಯ ಮೂಲಕ ನಿರ್ಮಾಣಗೊಂಡ ಗ್ರಾಮಪಂಚಾಯತ್ ಗೋದಾಮು ಕಟ್ಟಡ ಉದ್ಘಾಟನೆ ಹಾಗೂ ಪುಸ್ತಕದ ಗೂಡಿ ನ ಉದ್ಘಾಟನೆಯನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ರವರು ಮಾ.2 ರಂದು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನರೇಗಾ ಯೋಜನೆ ಅಡಿ ನಿರ್ಮಾಣವಾದ ಗೋದಾಮಿನ ಕಟ್ಟಡವು ವ್ಯವಸ್ಥಿತ ರೀತಿಯಲ್ಲಿ ಉಪಯೋಗವಾಗ ಬೇಕು. ನಾವು ರೈತರಾಗಿ ಕೇವಲ ಬೆಳೆಯನ್ನು ಬೆಳೆಯುವುದು ಮಾತ್ರವಲ್ಲ,ನಾವೇ ಬೆಳೆದ ಬೆಳೆಯನ್ನು ನಾವೇ ಮಾರುಕಟ್ಟೆ ಮಾಡುವುದರಿಂದ ಹೆಚ್ಚಿನ ಲಾಭ ಬರುತ್ತದೆ ಈ ಮೂಲಕ ರೈತರು ಸದೃಢವಾಗಲು ಸಾಧ್ಯ ಎಂದರು. ಕೇವಲ ಗಂಥಾಲಯ ನಿರ್ಮಾಣವಾದರೆ ಸಾಲದು, ಓದುಗರ ಸಂಖ್ಯೆ ಹೆಚ್ಚಾಗಬೇಕು, ಇದರಿಂದ ಸಮಾಜಕ್ಕೆ ಉಪಯೋಗವಾಗುತ್ತದೆ ಹಾಗೂ ಜ್ಞಾನ ವೃದ್ಧಿಯಾಗುತ್ತದೆ. ಕೇಂದ್ರ ಸರಕಾರವು ಸ್ವಉದ್ಯೋಗಕ್ಕೆ ಹೆಚ್ಚಿನ ಮಹತ್ವ ಕೊಡುವ ಉದ್ದೇಶದಿಂದ ನಾವುಗಳು ಹೆಚ್ಚು ಹೆಚ್ಚು ಸ್ವಉದ್ಯೋಗದ ಕಡೆ ಆಕರ್ಷಿತರಾಗ ಬೇಕೆಂದರು. ಸರಕಾರದಿಂದ ಗ್ರಾಮಗಳಿಗೆ ಬರುವಂತ ಯೋಜನೆಗಳನ್ನು ಯಾವ ರೀತಿ ತಲುಪಿಸಬೇಕು ಎಂಬುದರ ಬಗ್ಗೆ ಪಂಚಾಯತ್ ನ ಅಧ್ಯಕ್ಷರು, ಸದಸ್ಯರುಗಳು ಚಿಂತನೆ ಮಾಡಿ. ಕಾರ್ಯರೂಪಕ್ಕೆ ತರುವಲ್ಲಿ ತಮ್ಮ ಪಾತ್ರ ಪ್ರಮುಖವಾದದ್ದು ಎಂದರು.
ಜನತಾ ಕಾಲನಿಯ ಅಭಿವೃದ್ಧಿ, ಎಸ್ಸಿ,ಎಸ್ಟಿ ಕಾಲೋನಿಗಳ ಬಾಕಿ ಇರುವ ರಸ್ತೆಗಳ ನಿರ್ಮಾಣ, ನೆಲ್ಯಾಡಿ ಸರಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಬೇಡಿಕೆ, ಹೂಸವಕ್ಲು ಸಮೀಪ 1 ಕೋಟಿ ವೆಚ್ಚದಲ್ಲಿ ಸೇತುವೆಯ ನಿರ್ಮಾಣ ಮಾಡಿಕೊಡುವ ಬಗ್ಗೆ, ನೆಲ್ಯಾಡಿ ಪುತ್ತೆ ರಸ್ತೆ ನಿರ್ಮಾಣ ಮಾಡಿಕೊಡುವ ಬಗ್ಗೆ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಚೇತನಾ,ಉಪಾಧ್ಯಕ್ಷರಾದ ಅಬ್ದುಲ್ ಜಬ್ಬರ್, ಎಪಿಎಂಸಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಭೂ ಅಭಿವೃದ್ಧಿ ಬ್ಯಾಂಕಿನ ಭಾಸ್ಕರ ಗೌಡ ಇಚಿಲಂಪಾಡಿ, ತಾಲೂಕು ಪಂಚಾಯತಿನ ಮಾಜಿ ಸದಸ್ಯೆ ಉಷಾ ಅಂಚನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಅಡ್ವಕೇಟ್ ನೋಟರಿ ಇಸ್ಮಾಯಿಲ್, ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕೌಕ್ರಾಡಿ ಗ್ರಾಮ ಪಂಚಾಯತಿನ ಸದಸ್ಯ ಲೋಕೇಶ್ ಬಾಣಜಾಲು, ನೆಲ್ಯಾಡಿ ಪಂಚಾಯತ್ ನ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ
ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಕುಮಾರ್, ನರೇಗಾ ಯೋಜನೆಯ ಇಂಜಿನಿಯರ್ ಮನೋಜ್ ಕುಮಾರ್, ಶ್ರೀಲಕ್ಷ್ಮಿ, ಕಟ್ಟಡ ಕಾಮಗಾರಿಯನ್ನು ನಿರ್ವಹಿಸಿದ ಪಾಪಚ್ಚನ್ ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ನಿರೂಪಣೆಯೊಂದಿಗೆ ಸ್ವಾಗತವನ್ನು ಗ್ರಾಮ ಪಂಚಾಯತಿನ ಸದಸ್ಯ ಜಯಾನಂದ ಬಂಟ್ರಿಯಲ್ ನೆರವೇರಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾರವರಿಂದ ಧನ್ಯವಾದ .
—ಜಾಹೀರಾತು—