ನೆಲ್ಯಾಡಿ: ಧರ್ಮಸ್ಥಳ- ಧರ್ಮಸ್ಥಳ- ಸುಬ್ರಹ್ಮಣ್ಯ ಹೆದ್ದಾರಿ ಮಧ್ಯದಲ್ಲಿ ಬರುವ ಪೆರಿಯಶಾಂತಿ ಎಂಬಲ್ಲಿ ಹೆಣ್ಣು ಕೋತಿಯೊಂದು ಕಳೆದ ಕೆಲವು ದಿನಗಳಿಂದ ಪ್ರಯಾಣಿಕರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು-ಬೆಂಗಳೂರಿನ ಮಧ್ಯೆ ಧರ್ಮಸ್ಥಳ-ಸುಬ್ರಹ್ಮಣ್ಯ ವನ್ನು ಸಂಪರ್ಕಿಸುವ ಪೆರಿಯಶಾಂತಿಯೆಂಬಲ್ಲಿ ಪ್ರಯಾಣಿಕರು ನಿಂತಿರುವ ಸಂದರ್ಭದಲ್ಲಿ ಹೆಣ್ಣು ಕೋತಿಯೊಂದು ದಾಳಿ ನಡೆಸಿರುವ ಬಗ್ಗೆ ಕಳೆದ ಒಂದು ವಾರದಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.
ಇಚ್ಲಂಪಾಡಿ ನಿವಾಸಿ ಮಹಿಳೆ ಹಾಗೂ ಮಕ್ಕಳು, ಸಂಬಂಧಿಕರು ಸೇರಿ ಸುಮಾರು 15ಮಂದಿ ಸಕಲೇಶಪುರಕ್ಕೆ ಪ್ರಯಾಣಿಸಲು ಶನಿವಾರದಂದು ವಾಹನಕ್ಕೆ ಕಾಯುತ್ತಿರುವ ಸಂದರ್ಭ ಕೋತಿ ದಾಳಿ ನಡೆಸಿ ಕಚ್ಚಿ ಕಾಲಿಗೆ ಗಾಯವಾಗಿದ್ದು. ಇದೀಗ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ಕು ಚುಚ್ಚುಮದ್ದನ್ನು ಪಡೆಯುತ್ತಿದ್ದಾರೆ ಎಂಬುದಾಗಿ ದಾಳಿಗೆ ಒಳಗಾದ ಮಹಿಳೆ ಮಾಧ್ಯಮಕ್ಕೆ ತಿಳಿಸಿದರು.
ಸಂಬಂಧ ಪಟ್ಟ ಅರಣ್ಯ ಇಲಾಖೆಯವರು ಇದರ ಬಗ್ಗೆ ಗಮನಹರಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ಇದು ಅಪಾಯಕಾರಿಯಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ