ಪುತ್ತೂರು: ಸರಕಾರಿ ಬಸ್ ಸೇವೆ ಅಸ್ತವ್ಯಸ್ತ : 4 ದಿನ ಇದೇ ಸ್ಥಿತಿ!

ಶೇರ್ ಮಾಡಿ

ಪುತ್ತೂರು:ಕೆಎಸ್ ಆರ್ ಟಿಸಿ ಪುತ್ತೂರು ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸ್ ಚಾಲಕರ ಗುತ್ತಿಗೆ ಅವಧಿ ಮುಗಿದಿರುವ ಕಾರಣ ಶನಿವಾರ ಡಿಪೋ ವ್ಯಾಪ್ತಿಯಲ್ಲಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತು. ಬುಧವಾರದ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಪುತ್ತೂರಿನಲ್ಲಿ ಸರಕಾರಿ ನೇಮಕಾತಿ ಪಡೆದ 252 ಚಾಲಕರಿದ್ದಾರೆ. ಪನ್ನಗ ಎಂಬ ಸಂಸ್ಥೆಯ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ 31 ಚಾಲಕರು ಹಾಗೂ ಪೂಜ್ಯಾಯ ಎಂಬ ಸಂಸ್ಥೆ ಮೂಲಕ ನೇಮಕಗೊಂಡ 11 ಹೊರಗುತ್ತಿಗೆ ಚಾಲಕರಿದ್ದಾರೆ. ವರ್ಷಕ್ಕೊಮ್ಮೆ ಈ ಚಾಲಕರ ಗುತ್ತಿಗೆ ನವೀಕರಣಗೊಳ್ಳುತ್ತದೆ. ಪೂಜ್ಯಾಯ ಸಂಸ್ಥೆಯ 11 ಚಾಲಕರ ಗುತ್ತಿಗೆ ನವೀಕರಣ ಈಗಾಗಲೇ ಮುಗಿದಿದೆ.

ಪನ್ನಗ ಸಂಸ್ಥೆಯ ಅಡಿ ದುಡಿಯುತ್ತಿರುವ ಎಲ್ಲ 31 ಚಾಲಕರ ಗುತ್ತಿಗೆ ಸೋಮವಾರಕ್ಕೆ ಮುಗಿಯಲಿದೆ.

ಮದ್ಯದಲ್ಲಿ ಭಾನುವಾರ ಬಂದಿರುವ ಕಾರಣ ಶನಿವಾರವೇ 31 ಚಾಲಕರನ್ನು ನವೀಕರಣ ಪ್ರಕ್ರಿಯೆಗಾಗಿ ಅಧಿಕಾರಿಗಳು ಮೈಸೂರಿಗೆ ಕಳಿಸಿಕೊಟ್ಟಿದ್ದಾರೆ. ನವೀಕರಣ ಪ್ರಕ್ರಿಯೆ ಬುಧವಾರ ಮುಗಿಯಲಿದ್ದು, ಗುರುವಾರ ಎಲ್ಲರೂ ಕರ್ತವ್ಯ ಕ್ಕೆ ಹಾಜರಾಗಲಿದ್ದಾರೆ. ಅಲ್ಲಿಯವರೆಗೆ ಬಸ್ ಸಂಚಾರ ದಲ್ಲಿ ಸಮಸ್ಯೆ ಉಂಟಾಗಲಿದೆ. ಶನಿವಾರ ಒಂದೇ ದಿನ ಪುತ್ತೂರು ವ್ಯಾಪ್ತಿಯಲ್ಲಿ 14 ರೂಟ್ ಗಳಲ್ಲಿ ಬಸ್ ಓಡಿಸಲು ಸಾಧ್ಯವಾಗಲಿಲ್ಲ ಎಂದು ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಸರಕಾರಿ ನೇಮಿತ ಚಾಲಕರು ಅನಿವಾರ್ಯ ಕಾರಣ ಹೊರತು ರಜೆ ಮಾಡದೇ ಇರುವಂತೆ ತಿಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಚಾಲಕರ ಆಕ್ರೋಶ:
ಸರಕಾರ ನೀಡುವ ಸಂಬಳದಲ್ಲಿ ಗುತ್ತಿಗೆ ಕಂಪನಿಯವರು ಸಾಕಷ್ಟು ಕಡಿತ ಮಾಡಿ ನೀಡುತ್ತಿದ್ದಾರೆ ಎಂದು, ಈ ಮಧ್ಯೆ ಗುತ್ತಿಗೆ ಆಧರಿತ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎಸ್ಸಾರ್ಟಿಸಿಯು ಗುತ್ತಿಗೆ ಸಂಸ್ಥೆಗೆ ತಲಾ ಚಾಲಕರ ಹೆಸರಿನಲ್ಲಿ ಉತ್ತಮ ಸಂಬಳ ನೀಡುತ್ತದೆ. ಗುತ್ತಿಗೆ ಸಂಸ್ಥೆ ನಮಗೆ ನೀಡುವಾಗ ಸಾಕಷ್ಟು ಕಡಿತಗೊಳಿಸುತ್ತದೆ. ಈ ಬಗ್ಗೆ ಹಲವು ಭಾರೀ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ

ಶಾಲಾ ಮಕ್ಕಳಿಗೆ ಸಮಸ್ಯೆ:
ಪುತ್ತೂರು ಕೆಎಸ್ಸಾರ್ಟಿಸಿ ಡಿಪೋದಿಂದ ಮಂಗಳೂರು, ಉಪ್ಪಿನಂಗಡಿ, ಸುಳ್ಯ, ವಿಟ್ಲ ಸೇರಿದಂತೆ ಗ್ರಾಮೀಣ ಬಾಗಕ್ಕೆ ಕೂಡಾ ನೂರಾರು ಬಸ್ ಗಳು ಓಡಾಡುತ್ತವೆ. ಸಾವಿರಾರು ವಿದ್ಯಾರ್ಥಿಗಳು ಈ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಇವರೆಲ್ಲ ಶನಿವಾರ ತೀರ ಸಂಕಷ್ಟ ಅನುಭವಿಸಿದರು.

  •  

Leave a Reply

error: Content is protected !!