ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಕೋರಿ ಜಾತ್ರೆಯು ಸಂಭ್ರಮದಿಂದ ಸಮಾಪನಗೊಂಡಿತು.
ಸಂಪ್ರದಾಯದ ಪ್ರಕಾರ ನೀಲೇಶ್ವರ ಎಡಮನೆ ಬ್ರಹ್ಮಶ್ರೀ ಕೆ.ಯು ಪದ್ಮನಾಭ ತಂತ್ರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ರಮಾನಂದ ಭಟ್ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.
ಜಾತ್ರೆಯ ಹಿಂದಿನ ದಿನ ಸಾಯಂಕಾಲ ಕಂಬಳದ ಗದ್ದೆಗೆ ಹಾಲು ಹಾಕಿ ಗದ್ದೆಯ ಸುತ್ತ ದೀಪ ಹಚ್ಚಿ ಅಲಂಕರಿಸುತ್ತಾರೆ. ಮರುದಿನ ಬೆಳಗ್ಗೆ ಗುತ್ತಿನ ಮನೆಯಿಂದ ಅಲಂಕರಿಸಿದ ಹೋರಿ ಹಾಗೂ ಕೋಣಗಳ ಜತೆಗೆ ಪ್ರತಿ ಊರಿನಿಂದ ಹರಕೆ ಹೇಳಿ ಬಂದ ಜಾನುವಾರುಗಳನ್ನು ದೇವಸ್ಥಾನಕ್ಕೆ ಕರೆ ತಂದು ಅನಂತರ ದೇವರ ಗದ್ದೆಗೆ ವಾದ್ಯ ಘೋಷದೊಂದಿಗೆ ಕರೆದೆuಟಿಜeಜಿiಟಿeಜಯ್ಯಲಾಗುತ್ತದೆ. ಗುತ್ತಿನ ಹೋರಿಗಳನ್ನು ಮೊದಲು ಇಳಿಸಿ ಬಳಿಕ ಇತರ ಜಾನುವಾರುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿಸಲಾಯಿತ್ತು. ಅನಾರೋಗ್ಯದ ಕಾರಣದಿಂದ ಹರಕೆ ಹೇಳಿಕೊಂಡ ಮಂದಿ ಸೊಪ್ಪಿನ ಕಟ್ಟನ್ನು ತಲೆಯಲ್ಲಿ ಹೊತ್ತು ಒಂದು ಸುತ್ತು ಬಂದು ಸೊಪ್ಪನ್ನು ಗದ್ದೆಗೆ ಹಾಕಿ ಗದ್ದೆಯ ನೀರನ್ನು ತೀರ್ಥವಾಗಿ ಸೇವಿಸಿ ಪೆÇ್ರೀಕ್ಷಣೆ ಮಾಡಿಕೊಳ್ಳುತ್ತಾರೆ. ಇದಕ್ಕೆಂದು ದೂರದೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಸಂಜೆ ದೇಗುದಲ್ಲಿ ಶ್ರೀ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ದೇವರ ಬಲಿ ಸೇವೆ ನಡೆಸಿ, ದೇವರ ಗದ್ದೆಗೆ ಭಕ್ತರ ಮೆರವಣಿಗೆಯೊಂದಿಗೆ ದೇವರು ಕೋರಿ ಗದ್ದೆಯ ಮಜಲಿನಲ್ಲಿರುವ ಕಟ್ಟೆಯಲ್ಲಿ ರಾರಾಜಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ಸೇವೆ, ಸಂಜೆ ಕಟೀಲು ಮೇಳದವರಿಂದ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟ ಜರಗಿತು.
ಪವಿತ್ರಪಾಣಿ ಎ.ರಾಧಕೃಷ್ಣ ಎಡಪಡಿತ್ತಾಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ನೌಕರ ವೃಂದ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.