ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ನೂತನವಾಗಿ ಜೋಡಣೆಗೊಂಡ ಸಿ.ವಿ.ರಾಮನ್ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಡಿ.21ರಂದು ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದೇಶ ಹೆಮ್ಮೆಯ ದೇಶ, ವಿಶ್ವಕ್ಕೆ ಜ್ಞಾನ ಮತ್ತು ವಿಜ್ಞಾನ ಕೊಟ್ಟ ಮಹಾ ಪುರುಷರು, ಸಾಧಕರು ಹುಟ್ಟಿದ ನಾಡಿದು. ಇವತ್ತಿನ ಕೆಲವೊಂದು ಸಂಶೋಧನೆಗಳಿಗೆ ಮೂಲ ಭಾರತೀಯ ವಿಜ್ಞಾನದ ಕೊಡುಗೆ. ಇತಿಹಾಸದ ಸತ್ಯವನ್ನು ವಿದ್ಯಾರ್ಥಿಗಳಿಗೆ ನೀಡಿದಾಗ ನಮ್ಮ ಮುಂದಿನ ಪೀಳಿಗೆ ಇನ್ನುಷ್ಟು ಸಾಧನೆಗಳನ್ನು ತಂದುಕೊಳ್ಳಬಹುದು, ಭಾರತೀಯ ವಿಜ್ಞಾನಿಗಳು ಶ್ರೇಷ್ಠ ಸಾಧಕರು ವಿಶ್ವಕ್ಕೆ ಶ್ರೇಷ್ಠತೆಯ ಸಾಧನೆಗೈದ ವಿಜ್ಞಾನಿಗಳು ನಮ್ಮ ದೇಶದವರು ಎಂದರು.
ವೇದಿಕೆಯಲ್ಲಿ ನೆಲ್ಯಾಡಿ ಕೆನರಾ ಬ್ಯಾಂಕ್ ಶಾಖೆಯ ಅಧಿಕ್ಷಕರಾದ ವಿಪಿನ್ ಮತ್ತು ನಿವೃತ್ತ ಅಧಿಕ್ಷಕರಾದ ರಾಘವೇಂದ್ರ.ವೈ.ಕೆ ಉಪಸ್ಥಿತರಿದ್ದರು.
ಶ್ರೀರಾಮ ಶಾಲಾ ಅಧ್ಯಕ್ಷರಾದ ಡಾ.ಮುರಳೀಧರ ಸ್ವಾಗತಿಸಿದರು, ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಸಹಕರಿಸಿದರು, ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಮೂಲಚಂದ್ರ ವಂದಿಸಿದರು.