ಅಡ್ಡಹೊಳೆ: ಮನೆಯವರು ಕ್ರಿಸ್‌ಮಸ್ ಪೂಜೆಗೆ ಚರ್ಚ್ ಗೆ ಹೋಗಿದ್ದ ವೇಳೆ ಮನೆಯಿಂದ ಚಿನ್ನ, ನಗದು ಕಳ್ಳತನ

ಶೇರ್ ಮಾಡಿ

ನೆಲ್ಯಾಡಿ: ಮನೆಯವರು ಕ್ರಿಸ್‌ಮಸ್ ಪೂಜೆಗೆ ಚರ್ಚ್ ಗೆ ಹೋಗಿದ್ದ ವೇಳೆ ಮನೆಯೊಂದರಿಂದ ರೂ.1ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ 78 ಸಾವಿರ ನಗದು ಕಳವುಗೊಂಡಿರುವ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಡಿ.24ರಂದು ರಾತ್ರಿ ನಡೆದಿದೆ.

ಅಡ್ಡಹೊಳೆ ನಿವಾಸಿ ತಂಗಚ್ಚನ್ ಪಿ.ಒ.ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ತಂಗಚ್ಚನ್ ಪಿ.ಒ., ಅವರ ಪತ್ನಿ ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾತಂಗಚ್ಚನ್ ಹಾಗೂ ವಿಕಲಚೇತನ ಇಬ್ಬರು ಮಕ್ಕಳು ಡಿ.24ರಂದು ರಾತ್ರಿ 7 ಗಂಟೆಗೆ ಮನೆ ಬಾಗಿಲಿಗೆ ಬೀಗ ಹಾಕಿ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಮನೆಯಿಂದ 1 ಕಿ.ಮೀ.ದೂರದಲ್ಲಿರುವ ಸೈಂಟ್ ಮೇರಿಸ್ ಮಲಂಕರ ಕೆಥೋಲಿಕ್ ಚರ್ಚ್ ಗೆ ಪೂಜೆಗೆ ಹೋಗಿ ಅಲ್ಲಿ ಪ್ರಾರ್ಥನೆ ಮುಗಿಸಿ ವಾಪಾಸ್ಸು ರಾತ್ರಿ 11 ಗಂಟೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಕಪಾಟಿನ ಲಾಕರ್‌ನ ಒಳಗೆ ಪರ್ಸ್ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವುಗೈದಿದ್ದಾರೆ. ಅಲ್ಲದೆ ಅದೇ ಲಾಕರ್‌ನಲ್ಲಿ ಇನ್ನೊಂದು ಪರ್ಸ್‍ನಲ್ಲಿ ಮನೆ ರಿಪೇರಿಗೆಂದು ಸಾಲವಾಗಿ ಪಡೆದು ತಂದಿರಿಸಿದ್ದ ರೂ.78 ಸಾವಿರವನ್ನು ಕಳವುಗೈದಿದ್ದಾರೆ ಎಂದು ವರದಿಯಾಗಿದೆ.

ಕಳವಾದ ಚಿನ್ನ:
40 ಸಾವಿರ ರೂ.ಮೌಲ್ಯದ 10 ಗ್ರಾಮ್ ತೂಕದ ಚಿನ್ನದ ಕಾಯಿನ್-1, 8 ಸಾವಿರ ರೂ.ಮೌಲ್ಯದ ತಲಾ 1 ಗ್ರಾಮ್ ತೂಕದ ಚಿನ್ನದ ಉಂಗುರ-2, 24 ಸಾವಿರ ರೂ.ಮೌಲ್ಯದ 3 ಗ್ರಾಂ.ತೂಕದ ಉಂಗುರ-2, 16 ಸಾವಿರ ರೂ.ಮೌಲ್ಯದ 2ಗ್ರಾಂ ತೂಕದ ಚಿನ್ನದ ಬೆಂಡೋಲೆ-2, 8 ಸಾವಿರ ರೂ.ಮೌಲ್ಯದ 2 ಗ್ರಾಂ ತೂಕದ ಚಿನ್ನದ ಹ್ಯಾಂಗೀಸ್-1 ಜೊತೆ, 48 ಸಾವಿರ ರೂ.ಮೌಲ್ಯದ 12ಗ್ರಾ ತೂಕದ ಚಿನ್ನದ ಚೈನ್ -1, 8 ಸಾವಿರ ರೂ.ಮೌಲ್ಯದ 2ಗ್ರಾಂ ತೂಕದ ಶಿಲುಬೆ ಅಕೃತಿಯ ಚಿನ್ನದ ಪದಕ-1, 16 ಸಾವಿರ ರೂ.ಮೌಲ್ಯದ 4 ಗ್ರಾಂ ತೂಕದ ಲಕ್ಷ್ಮೀ ಚಿತ್ರ ಇರುವ ಚಿನ್ನದ ಕಾಯಿನ್ -1 ಕಳವುಗೊಂಡಿದೆ. ಒಟ್ಟು ಸುಮಾರು 42 ಗ್ರಾಂ ತೂಕದ ಹಳೆಯ ಚಿನ್ನಾಭರಣ ಕಳವಾಗಿದ್ದು ಅವುಗಳ ಒಟ್ಟು ಮೌಲ್ಯ 1.68 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಚಿನ್ನ ಹಾಗೂ ನಗದು 78 ಸಾವಿರ ಸೇರಿ ಒಟ್ಟು ಕಳವಾದ ಸೊತ್ತುಗಳ ಮೌಲ್ಯ 2.46 ಲಕ್ಷ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರಾಜೇಂದ್ರ, ಉಪ್ಪಿನಂಗಡಿ ಸಬ್‌ಇನ್ಸ್ಪೆಕ್ಟರ್ ಅವಿನಾಶ್, ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ತಪಾಸಣೆ ನಡೆಸಿದ್ದಾರೆ. ತಂಗಚ್ಚನ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  •  

Leave a Reply

error: Content is protected !!