ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಟ್ಟೆಜಾಲು-ಪಡ್ಪಗುಡ್ಡೆಗೆ 4ಲಕ್ಷ ವೆಚ್ಚ4ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ಉಪಾಧ್ಯಕ್ಷೆ ರೇಶ್ಮಾ ಶಶಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ರಸ್ತೆ ಉದ್ಘಾಟಿಸಿ ಬಳಿಕ ಮಾತನಾಡಿದ ಅಧ್ಯಕ್ಷ ಸಲಾಂ ಬಿಲಾಲ್ ಬಹಳ ವರ್ಷದ ಬೇಡಿಕೆಯ ಪಟ್ಟೆಜಾಲು-ಪಡ್ಪಗುಡ್ಡೆಯ ರಸ್ತೆಯ ಕಾಂಕ್ರಿಟೀಕರಣ ಉಪಾಧ್ಯಕ್ಷೆ ರೇಶ್ಮಾ ಶಶಿ ಹಾಗೂ ಪಂಚಾಯಿತಿ ಸದಸ್ಯ ಮಹಮ್ಮದ್ ಇಕ್ಬಾಲ್ ಅವರ ಅನುದಾನ ಹಾಗೂ ನಿರಂತರ ಬೇಡಿಕೆಯ ಫಲವಾಗಿ ಆಗಿದೆ ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜ್ ಮಾತನಾಡಿ, ಯಾವುದೇ ಕೆಲಸವನ್ನು ನಾವು ಕೈಗೆತ್ತಿಕೊಂಡಾಗ ಊರ ಜನರ ಸಹಕಾರ ಇದ್ದರೆ ಖಂಡಿತ ಒಳ್ಳೆಯ ಅಭಿವೃಧ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿ, ಕಾಮಗಾರಿಯನ್ನು ಶ್ಲಾಘಿಸಿದರು. ಪಂಚಾಯಿತಿ ನ ಮಾಜಿ ಅಧ್ಯಕ್ಷರಾದ ಧರ್ಣಪ್ಪ ಹೆಗ್ಡೆ ಮಾತನಾಡುತ್ತಾ ಮಹಮ್ಮದ್ ಇಕ್ಬಾಲ್ ಅವರು ತಮ್ಮ 5 ವರ್ಷದ ಅವಧಿಯನ್ನು ಪರಿಪೂರ್ಣವಾಗಿ ಊರಿನ ಅಭಿವೃಧ್ಧಿಗಾಗಿ ಮೀಸಲಿಟ್ಟಿದ್ದಾರೆ, ಇನ್ನು ಮುಂದೆಯೂ ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಕಾರ್ಯಾಕ್ರಮದಲ್ಲಿ ಪಂಚಾಯಿತಿ ಸದಸ್ಯ ಮಹಮ್ಮದ್ ಇಕ್ಬಾಲ್ ಅವರನ್ನು ಸಮಾಜಸೇವೆಗಾಗಿ ಸನ್ಮಾನಿಸಲಾಯಿತು. ಗ್ರಾ.ಪಂ ಕಾರ್ಯದರ್ಶಿ ಅಂಗು, ಕಾಂಟ್ರಾಕ್ಟರ್, ಶಿವಪ್ರಸಾದ್, ಊರ ಹಿರಿಯರಾದ ಜೋಸೆಫ್ ಡಿಸೋಜಾ ಪಡ್ಪಗುಡ್ಡೆ, ಆನಂದ ಹೆಗಡೆ, ಧರ್ಣಪ್ಪ ಹೆಗ್ಡೆ, ಡೆನಿಸ್ ಡಿಸೋಜಾ, ದೇವಕಿ, ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಸಂಪಾವತಿ ಕಾರ್ಯಕ್ರಮ ನಿರೂಪಿಸಿದರು.