ನೆಲ್ಯಾಡಿ:ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ಉದ್ಘಾಟನೆ ಹಾಗೂ ಕ್ರಿಸ್ಮಸ್ ಕಾರ್ಣಿವಲ್ 2024 ಸೈಂಟ್ ಜಾರ್ಜ್ ಓರ್ಥೋಡೋಕ್ಸ್ ಸೀರಿಯಲ್ ಚರ್ಚ್ ಇಚ್ಲಂಪಾಡಿಯಲ್ಲಿ ಅದ್ದೂರಿಯಾಗಿ ನಡೆಯಿತು.
ವಿವಿಧ ಚರ್ಚೆಗಳ ಆಕರ್ಷಕ ಸ್ಥಬ್ದ ಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು. ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ಅಧ್ಯಕ್ಷ ಜೋನ್ಸನ್.ಕೆ.ಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ರೆ.ಫಾ.ವರ್ಗೀಸ್ ತೋಮಸ್ ಇಚ್ಲಂಪಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವರ್ಗೀಸ್ ಕೈಪನಡ್ಕ ಕ್ರಿಸ್ಮಸ್ ಸಂದೇಶವನ್ನು ನೀಡಿದರು. ವೇದಿಕೆಯಲ್ಲಿ ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್, ರೆ.ಫಾ.ಆಂಟೋನಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ, ಪಿ.ಟಿ.ಚಾಕೋ, ನ್ಯಾಯವಾದಿ ಸಿಲ್ವಿಯಾ ಡಿಸೋಜಾ, ತೋಮಸ್, ಜಾನ್ಸನ್ ಸಾಮುವೆಲ್ ಉಪಸ್ಥಿತರಿದ್ದರು.
ಜಿ.ತೋಮಸ್ ಸ್ವಾಗತಿಸಿದರು. ನಿತಿನ್ ಮ್ಯಾತ್ಯು ವರದಿ ವಾಚಿಸಿದರು. ಜೀಮ್ಸನ್ ವರ್ಗೀಸ್, ಜಿ.ತೋಮಸ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 15ಜನರನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ಚರ್ಚೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.