ಪತಿ ಹಾಗೂ ತನ್ನ ಆರು ಮಂದಿ ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ

ಶೇರ್ ಮಾಡಿ

ವಿವಾಹಿತ ಮಹಿಳೆಯೊಬ್ಬರು ಭಿಕ್ಷುಕನ ಜೊತೆ ಓಡಿ ಹೋಗಿದ್ದಾರೆ. ಆಕೆ ಗಂಡ ಹಾಗೂ ತನ್ನ ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಎಸ್ಕೇಪ್‌ ಆಗಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಉತ್ತರ ಪ್ರದೇಶದ ಹರ್ದೋಯ್‌ ಜಿಲ್ಲೆಯಲ್ಲಿ ಈ ವಿಚಿತ್ರ ಪ್ರಕರಣ ನಡೆದಿದ್ದು, 36 ವರ್ಷ ವಯಸ್ಸಿನ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಓಡಿ ಹೋಗಿದ್ದಾರೆ. ಈ ಬಗ್ಗೆ ಆಕೆಯ ಪತಿ ರಾಜು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 87ರ ಅಡಿಯಲ್ಲಿ ಅಪಹರಣ ಸಂಬಂಧಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಹಾಗೂ ಭಿಕ್ಷುಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ದೂರಿನಲ್ಲಿ, ಮಹಿಳೆಯ ಪತಿ 45 ವರ್ಷ ವಯಸ್ಸಿನ ರಾಜು, ತಮ್ಮ ಪತ್ನಿ ರಾಜೇಶ್ವರಿ ಮತ್ತು ಆರು ಮಕ್ಕಳೊಂದಿಗೆ ಹರ್ದೋಯ್‌ನ ಹರ್ಪಾಲ್‌ಪುರ ಪ್ರದೇಶದಲ್ಲಿ ನಾವು ವಾಸವಿದ್ದೆವು. ನಮ್ಮ ಊರಿಗೆ ಆಗಾಗ್ಗೆ ಸುಮಾರು 45 ವರ್ಷ ವಯಸ್ಸಿನ ನನ್ಹೆ ಪಂಡಿತ್‌ ಎಂಬ ಭಿಕ್ಷು ಭಿಕ್ಷೆ ಬೇಡಲು ಬರುತ್ತಿದ್ದನು. ಮತ್ತು ನನ್ನ ಪತ್ನಿಯೊಂದಿಗೆ ಮಾತುಕತೆಯನ್ನು ಕೂಡಾ ನಡೆಸುತ್ತಿದ್ದ. ನಂತರ ಇವರಿಬ್ಬರು ಫೋನ್‌ನಲ್ಲಿಯೂ ಸಂಪರ್ಕದಲ್ಲಿದ್ದರು ಎಂದು ಉಲ್ಲೇಖಿಸಿದ್ದಾರೆ.

ಜನವರಿ 3ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಪತ್ನಿ ರಾಜೇಶ್ವರಿ, ನಮ್ಮ ಮಗಳು ಖುಷ್ಬೂಗೆ ಬಟ್ಟೆ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋದವಳು ವಾಪಸ್‌ ಬಂದೇ ಇಲ್ಲ. ನಂತರ ಆಕೆ ಓಡಿ ಹೋಗಿದ್ದಾಳೆ ಎಂಬುದು ಗೊತ್ತಾಗಿದೆ. ನಾನು ಎಮ್ಮೆ ಮಾರಿ ಕೂಡಿಟ್ಟ ಹಣವನ್ನು ಎಗರಿಸಿ ಭಿಕ್ಷುಕನೊಂದಿದೆ ಹೆಂಡ್ತಿ ಓಡಿ ಹೋಗಿರುವ ಶಂಕೆ ಇದೆ” ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 87 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಇದೀಗ ಪೊಲೀಸರು ಭಿಕ್ಷುಕ ಹಾಗೂ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  •  

Leave a Reply

error: Content is protected !!