ನೆಲ್ಯಾಡಿ ಆಸುಪಾಸಿನ ಗ್ರಾಮದ ಮರಾಟಿ ಸಮಾಜ ಬಾಂಧವರ ನೂತನ ಸಂಘವನ್ನು ಜ.12ರಂದು ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ರಚನೆ ಮಾಡಲಾಯಿತು.
ಕೆ.ಎಸ್.ಆರ್.ಟಿ.ಸಿ ಬಸ್ ನ ಚಾಲಕರಾಗಿ ನಿವೃತ್ತರಾದ ಅಣ್ಣು ನಾಯ್ಕ ಪೆಲತ್ತಿಲ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮರಾಟಿ ಸಮಾಜ ಬಾಂಧವರು ಸಂಘಟನೆಯ ಬಲವನ್ನು ಹೆಚ್ಚಿಸಿಕೊಂಡು ಸಮಾಜೋಪಯೋಗಿ ಕಾರ್ಯಗಳನ್ನು ಕೈಗೆತ್ತಿಕೊಂಡು ಉತ್ತರೋತ್ತರ ಶ್ರೇಯಸ್ಸನ್ನು ಗಳಿಸುವಂತಾಗಲೆಂದು ಶುಭ ಹಾರೈಸಿದರು. ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ ಬರೆಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಇತಿಮಿತಿ ಹಾಗೂ ಸಂಘಟನೆಯಿಂದಾಗುವ ಪ್ರಯೋಜನ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.
ಸಭೆಗೆ ಹಾಜರಾದ ಮರಾಟಿ ಸಮಾಜ ಬಾಂಧವರ ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಿ 21 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮರಾಟಿ ಸಮಾಜ ಸೇವಾ ಸಂಘ ನೆಲ್ಯಾಡಿ -ಕೌಕ್ರಾಡಿ ಎಂಬ ಶೀರ್ಷಿಕೆಯಡಿ ಕಾರ್ಯೋನ್ಮುಖವಾಗಲಿದೆ.
ನೂತನ ಸಂಘದ ಅಧ್ಯಕ್ಷರಾಗಿ ಶೀನಪ್ಪ ನಾಯ್ಕ ಬರೆಗುಡ್ಡೆ, ಉಪಾಧ್ಯಕ್ಷರಾಗಿ ಪೂವಪ್ಪ ನಾಯ್ಕ ಕಟ್ಟೆಮಜಲು, ಕಾರ್ಯದರ್ಶಿ ನಾರಾಯಣ ನಾಯ್ಕ ಚಾಮೆತ್ತಮೂಲೆ, ಜೊತೆ ಕಾರ್ಯದರ್ಶಿ ಶೋಭಾ.ಕೆ ಕಲ್ಲಳಿಕೆ, ಕೋಶಾಧಿಕಾರಿ ವಿಶ್ವನಾಥ ನಾಯ್ಕ ನಿಸರ್ಗ, ಸಂಘಟನಾ ಕಾರ್ಯದರ್ಶಿ ದಿನೇಶ್ ನಾಯ್ಕ ಪಡುಬೆಟ್ಟು, ಧನಂಜಯ ನಾಯ್ಕ ಕೋಡಿಜಾಲ್, ನವೀನ ನಾಯ್ಕ ಕುಮೇರು, ಸೇಸಪ್ಪ ನಾಯ್ಕ ಪರಂತಮೂಲೆ, ಸದಸ್ಯರಾಗಿ ಸದಾನಂದ ನಾಯ್ಕ ಕೋಡಿಮನೆ,ಸಂಜೀವ ನಾಯ್ಕ ಕೋಡಿಜಾಲ್, ವಿಮಲ ಪಲಸತ್ತಡ್ಕ, ಸುಧಾಕರ ಕಟ್ಟೆಮಜಲು, ಸುಂದರ ನಾಯ್ಕ ಮಾದೇರಿ, ವಾಸಪ್ಪ ನಾಯ್ಕ ಗಾಂಧಾರಿ ಮಜಲು, ಲೋಕೇಶ್ ನಾಯ್ಕ ಕೊಂತ್ರುಜಾಲ್, ಬಾಲಕೃಷ್ಣ ನಾಯ್ಕ ಪಡುಬೆಟ್ಟು, ಜಯಂತಿ ನಾಯ್ಕ ಕುಮೇರು, ನಿತಿನ್ ಕುಮಾರ್ ಗುರಿಯಡ್ಕ, ಅಶ್ವಿನಿ ನಾಯ್ಕ ಪೆಲತ್ತಿಲ, ಗಣೇಶ್ ನಾಯ್ಕ ಚಾಮೆತ್ತಮೂಲೆ ಆಯ್ಕೆಯಾದರು.
ವೇದಿಕೆಯಲ್ಲಿ ನಾರಾಯಣ ನಾಯ್ಕ ಚಾಮೆತ್ತಮೂಲೆ, ರಮೇಶ್ ನಾಯ್ಕ ಕಲ್ಲಳಿಕೆ, ಪೂವಪ್ಪ ನಾಯ್ಕ ಕಟ್ಟೆಮಜಲು ಆಸೀನರಾಗಿದ್ದರು.ನೂತನ ಸಂಘದ ಪದ ಪ್ರದಾನ ಕಾರ್ಯಕ್ರಮವು ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ.
ಪ್ರಜ್ಞಾ ನಾಯ್ಕ ಮತ್ತು ತಂಡ ಪ್ರಾರ್ಥಿಸಿದರು. ವಿದ್ಯಾಲತಾ ಚಾಮೆತ್ತಮೂಲೆ ಸ್ವಾಗತಿಸಿ ನಿರೂಪಿಸಿದರು. ದಿನೇಶ್ ನಾಯ್ಕ ಪಡುಬೆಟ್ಟು ವಂದಿಸಿದರು.