
ನೆಲ್ಯಾಡಿ ಸಂತ ಅಲ್ಫೋನ್ಸ ಜಾತ್ರಾ ಮಹೋತ್ಸವ ಜ.17ರಂದು ಪ್ರಾರಂಭಗೊಂಡು ವಿಜೃಂಭಣೆಯಿಂದ ನಡೆಯುತ್ತಿದ್ದು ಪ್ರತಿದಿನ ನೂರಾರು ಮಂದಿ ಸಂತ ಅಲ್ಫೋನ್ಸಮ್ಮ ನವರಲ್ಲಿ ತಮ್ಮಾ ಇಷ್ಟಾರ್ಥಗಳನ್ನು ಬೇಡಿಕೊಳ್ಳಲು ಭೇಟಿ ನೀಡುತ್ತಿದ್ದಾರೆ.

ಗುರುವಾರ ನೂರಾರು ವಾಹನ ಚಾಲಕ ಮಾಲಕರು ಪ್ರತಿ ವರ್ಷದಂತೆ ತಮ್ಮ ವಾಹನಗಳನ್ನು ಆಶೀರ್ವದಿಸಲು ದೇವಾಲಯಕ್ಕೆ ತರಲಾಯಿತು. ಧರ್ಮ ಗುರುಗಳಾದ ವಂ.ಫಾ.ಶಾಜಿ ಮಾತ್ಯು, ಫಾ.ಎಬಿನ್ ಬೆಥನಿ ಸಮೂಹ ಸಂಸ್ಥೆಗಳ ಫಾ.ಜೈಸನ್ ಓಐಸಿ ಪ್ರಾರ್ಥನಾ ವಿಧಿಗಳಿಗೆ ನೇತೃತ್ವ ನೀಡಿದರು.






