ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಶೇರ್ ಮಾಡಿ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಧಾರ್ಮಿಕ ಶ್ರದ್ದೆ ಮತ್ತು ಭಕ್ತಿಯಿಂದ ಹತ್ತು ದಿನಗಳವರೆಗೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಸಂತ ಅಲ್ಫೋನ್ಸ ಮುಖಾಂತರ ಪ್ರಭು ಕ್ರಿಸ್ತರಲ್ಲಿ ಭಿನ್ನವಿಸಿ ಕೊಳ್ಳಲಾಯಿತು. ನೋವೇನಾ, ಬಲಿಪೂಜೆ,ಆಕರ್ಷಕ ಮೆರವಣಿಗೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಕ್ರೈಸ್ತ ಸಮಾಜದ ವಿವಿದ ಧರ್ಮಗುರುಗಳ ಸಾನಿದ್ಯ ಹಬ್ಬಕ್ಕೆ ವಿಶೇಷ ಕಳೆಯನ್ನು ನೀಡಿತು. ರಾಸ ಬಲಿಪೂಜೆಯಲ್ಲಿ ರೆ.ಫಾ.ಸಿಬಿ ತೋಮಸ್ ಪನಚಿಕ್ಕಲ್, ರೆ.ಫಾ.ಜೇಮ್ಸ್ ಬೆಥನಿ, ರೆ. ಫಾ.ಅರುಣ್ ಕೊಕ್ಕಡ, ರೆ.ಫಾ.ನೋಮಿಸ್ ಸೆಂಟ್ ಜಾರ್ಜ್, ರೆ.ಫಾ.ಬಿಜು ಜೋನ್, ಪುತ್ತೂರು ಧರ್ಮ ಪ್ರಾಂತ್ಯ, ರೆ.ಫಾ.ಅನಿಷ್ ಆರ್ಲ ಕೊಣಾಲು, ರೆ.ಫಾ.ಬಿನು ವರ್ಗೀಸ್ ಇಚಿಲಂಪಾಡಿ, ರೆ.ಫಾ.ಜೋಬಿಷ್ ತಡತಿಲ್ ಸೆಂಟ್ ಸ್ಟೀಪನ್ ನೆಲ್ಯಾಡಿ, ರೆ.ಫಾ.ಜೋಸೆಫ್ ಪಾòಪಕ್ಕಲ್ ಅಡ್ಡಹೊಳೆ, ರೆ.ಫಾ.ಜೈಸನ್ ಬೆಥನಿ, ರೆ.ಫಾ ಹನಿಜೇಕಬ್, ರೆ.ಫಾ.ಜೋಬಿಷ್ ಉದನೆ, ರೆ.ಫಾ.ಜೋಸೆಫ್ ಪೂದಕ್ಕುಯಿ ಶಿರಾಡಿ, ರೆ. ಫಾ.ಜಿಬಿನ್ ಬೋಬಿ ಕೊಕ್ಕಡ, ರೆ.ಫಾ.ಜಿಜನ್ ಮೊದಲಾದವರು ಬಾಗವಹಿದ್ದರು.

ಟ್ರಸ್ಟಿಗಳಾದ ಅಲೆಕ್ಸಾòಡೆರ್ ಚೆಮ್ಪಿತಾನಮ್, ಜೋಬಿನ್ ಪರಪರಾಗತ್, ಅಲ್ಬಿನ್ ಕೈದ ಮಟ್ಟಮ್, ಶಿಬು ಪನಚಿಕ್ಕಲ್ ಮೇಲುಸ್ತುವಾರಿ ವಹಿಸಿದ್ದರು. ಪುಣ್ಯಕ್ಷೇತ್ರದ ಧರ್ಮಗುರು ರೆ.ಫಾ.ಶಾಜಿ ಮಾತ್ಯು ಸ್ವಾಗತಿಸಿದರು. ರೆ.ಫಾ.ಎಬಿನ್ ವಂದಿಸಿದರು.

  •  

Leave a Reply

error: Content is protected !!