

ಕಡಬ: ಸರಸ್ವತೀ ಸಮೂಹ ಸಂಸ್ಥೆಗಳು ಕಡಬ ಇದರ ವಾರ್ಷಿಕ ಕ್ರೀಡಾಕೂಟವು ಹನುಮಾನ್ ನಗರ ಕೇವಳ ಕಡಬದಲ್ಲಿ ಜರಗಿತು.

ಕ್ರೀಡಾಕೂಟವನ್ನು ಕಡಬ ಆರಕ್ಷಕ ಠಾಣೆಯ ಹೆಡ್ ಕಾನ್ಸ್ಸ್ಟೇಬಲ್ ಹರೀಶ್.ಪಿ ಅವರು ಉದ್ಘಾಟಿಸಿ ಮಾತನಾಡಿ ಕ್ರೀಡೆಯು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತದೆ. ಅಲ್ಲದೇ ಅನೇಕ ಜೀವನೋದ್ಯೋಗವನ್ನು ಪಡೆಯಲು ಸಹಕಾರಿಯಾಗಿದೆ. ಶಾಲಾ ಕ್ರೀಡಾಕೂಟವನ್ನು ವಿದ್ಯಾರ್ಥಿಗಳು ಭವಿಷ್ಯದ ಮೆಟ್ಟಿಲುಗಳನ್ನಾಗಿ ಸ್ವೀಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ, ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಗೌಡ ಹಳ್ಳಿಮನೆ ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖ್ಯ ಗುರುಗಳು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಮಾತಾಜಿ ಕುಮಾರಿ ಶ್ವೇತಾ ಕುಂದರ್ ಸ್ವಾಗತಿಸಿದರು, ಪ್ರೌಢ ವಿಭಾಗದ ಮುಖ್ಯ ಮಾತಾಜಿ ಶೈಲಶ್ರೀ ರೈ ವಂದಿಸಿದರು. ಮಾತಾಜಿಯವರಾದ ಸುಮಂಗಲ ಮತ್ತು ಸೌಮ್ಯ.ಕೆ.ಎ. ನಿರೂಪಿಸಿದರು.





