
ಕೊಕ್ಕಡ: ಭಾರತದ ಅತೀ ಶ್ರೀಮಂತ ದೇವಸ್ಥಾನ ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪ್ರಧಾನ ಮಹತ್ತರವಾದ ಗೌರವ ಇರುವ ಮಹಾಪ್ರಧಾನ ಅರ್ಚಕ ಸ್ಥಾನಕ್ಕೆ(ಪೆರಿಯನಂಬಿ) ಕೊಕ್ಕಡ ಬಡೆಕ್ಕರ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕ.

ಕಳೆದ ಆರು ತಿಂಗಳ ಹಿಂದೆ ಇಲ್ಲಿಗೆ ಪ್ರಧಾನ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡ ಕೊಕ್ಕಡದ ದಿ.ಸುಬ್ರಾಯ ತೋಡ್ತಿಲ್ಲಾಯರ ಹಾಗೂ ಶಾರದಾ ದಂಪತಿಯ ಎರಡನೇ ಪುತ್ರ ಬಡೆಕ್ಕರ ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯ(45). ಇವರಿಗೆ ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಮಹತ್ತರವಾದ ಗೌರವ ಇರುವ ಮಹಾಪ್ರಧಾನ ಅರ್ಚಕ ಸ್ಥಾನ(ಪೆರಿಯ ನಂಬಿ) (ಛತ್ರಿ ಮರ್ಯಾದೆ) ಪ್ರಾಪ್ತಿಯಾಗಿರುವುದು ಇತಿಹಾಸದ ಒಂದು ದೊಡ್ಡ ಮೈಲುಗಲ್ಲು. ಇದರ ಕೀರ್ತಿ ಇವರ ಹುಟ್ಟೂರಾದ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಮತ್ತು ವಿಶ್ವವಿಖ್ಯಾತ ನಂ.1 ಶ್ರೀಮಂತ ದೇವಳದ ಮಹಾಪ್ರಧಾನ ಅರ್ಚಕ ಹುದ್ದೆಯು ಕೇರಳದ ನೆರೆಯ ಕರ್ನಾಟಕ ರಾಜ್ಯಕ್ಕೂ ಒಂದು ಅತೀ ಹೆಮ್ಮೆಯ ವಿಷಯವಾಗಿದೆ.

ಊರಿನ ಓರ್ವ ಅರ್ಚಕರು ಅತ್ಯಲ್ಪ ಅವಧಿಯಲ್ಲೇ ಇಂತಹ ಮಹಾನ್ ಹುದ್ದೆಗೆ ನಿಯುಕ್ತಿಗೊಂಡಿರುವುದು ನಮ್ಮೂರಿಗೂ, ನಮ್ಮ ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ. ಇಲ್ಲೀ ತನಕದ ಇತಿಹಾಸದಲ್ಲಿ ಈ ಮಹಾಹುದ್ದೆಯನ್ನ ನಿರ್ವಹಿಸಿದವರು ನಮ್ಮೂರಿನ ಹಲವರು ಇದ್ದಾರಾದರೂ ಜೀವನದ ಸಂಧ್ಯಾಕಾಲದಲ್ಲಿ ಈ ಯೋಗ ಅವರಿಗೆಲ್ಲ ಸಿಕ್ಕಿರುವುದಾಗಿದೆ. ಈಗದ ವಿಶೇಷ ಏನೆಂದರೆ ಪ್ರಧಾನ ಅರ್ಚಕ ಸ್ಥಾನಕ್ಕೆ ಸೇರಿದ ಆರು ತಿಂಗಳಲ್ಲೇ ಈ ಮಹಾಪ್ರಧಾನ ಅರ್ಚಕ ಸ್ಥಾನದ ಸುಯೋಗ ಒದಗಿದ ಅತ್ಯಂತ ಕಿರಿಯ ವಯಸ್ಸಿನ ಮಹಾಪ್ರಧಾನ ಅರ್ಚಕರು(ಪೆರಿಯ ನಂಬಿ)ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯರು ಆಗಿದ್ದಾರೆ. ಈ ಹುದ್ದೆಗೇರಿದ ಬಳಿಕ ಗೃಹಸ್ಥಾಶ್ರಮ ತೊರೆದು ಸನ್ಯಾಸಿಯಂತೆ ಇರಬೇಕು. ಜೊತೆಗೆ ದೇವರ ಯಾವುದೇ ಉತ್ಸಾಹಗಳಿಗೆ ಇವರದ್ದೇ ಪ್ರಧಾನ ಪೊರೋಹಿತ್ಯವಾಗಿರುತ್ತದೆ.
ಜನವರಿ 30. 2025ರಂದು ಈ ಮಹಾನ್ ಹುದ್ದೆ ಇವರಿಗೆ ಪ್ರಾಪ್ತವಾಗಿದೆ. ಜ.30ರಿಂದ ಈ ಹಿರಿಯ ಜವಾಬ್ದಾರಿ ಅವರ ಹೆಗಲಿಗೇರಿದೆ.





