
ಕೊಕ್ಕಡ:: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಾಜೆಯಲ್ಲಿರುವ ಎಮ್.ಆರ್.ಎಫ್ ಘಟಕದಲ್ಲಿ ಒಣ ಕಸ ವಿಲೇವಾರಿ ಕುರಿತಂತೆ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ತರಬೇತಿ ಪ್ರಾರಂಭ.

ಅರಸಿನಮಕ್ಕಿ, ಶಿಬಾಜೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಸದಸ್ಯರಿಗೆ ಮೊದಲ ಹಂತದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್.ಎನ್ ಅವರು ಸ್ವಚ್ಛತೆ ಕಾಪಾಡುವಲ್ಲಿ ನಾಗರೀಕರಾಗಿ ನಮ್ಮ ಪಾತ್ರ ಮುಖ್ಯ. ಒಣ ಕಸ ಸಂಗ್ರಹಿಸಿ ಎಮ್.ಆರ್.ಎಫ್ ಘಟಕ ತಲುಪಿಸುವ ಕಾರ್ಯ ಸತತವಾಗಿ ನಡೆಯಬೇಕು ಎಂದು ಗ್ರಾ.ಪಂ ಅಧ್ಯಕ್ಷರಿಗೆ, ಸದಸ್ಯರಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿದರು.

ಈ ಸಂದರ್ಭ ಘನ ತ್ಯಾಜ್ಯ ನಿರ್ವಹಣಾ ಸಮಾಲೋಚಕರಾದ ನವೀನ್ ಕೋಣಾಜೆ ಮತ್ತು ಪವನ್ ಎಮ್.ಆರ್.ಎಫ್ ಘಟಕ ಕಾರ್ಯ ನಿರ್ವಹಿಸುತ್ತಿರುವ ಕುರಿತಂತೆ ಮಾಹಿತಿ ನೀಡಿದರು.
ಅಧಿಕಾರಿಗಳೊಂದಿಗೆ ತರಬೇತುದಾರರು ಘನ ತ್ಯಾಜ್ಯ ನಿರ್ವಹಣಾ ಘಟಕ, ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಲಾಯಿತು ಹಾಗೂ ವ್ಯೂಹಮ್ ಸಂಸ್ಥೆಯಡಿ ಬ್ಯಾಕ್ ಸೋಲ್ಡ್ಜರ್ ಫ್ಲೖ ಟೆಕ್ನೊಲಜಿ ಯಡಿ ಗೊಬ್ಬರ ತಯಾರಿಸುವ ಕುರಿತಂತೆ ಮಾಹಿತಿ ನೀಡಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಶಿಬಾಜೆ, ಅರಸಿನಮಕ್ಕಿ ಗ್ರಾಮಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಉಜಿರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಶಿಬಾಜೆ ಮತ್ತು ಅರಸಿನಮಕ್ಕಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯರಾಜ್, ಎನ್ ಆರ್. ಎಲ್. ಎಮ್ ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೖನ್, ಎಮ್. ಆರ್. ಎಫ್ ಘಟಕದ ಸಿಬ್ಬಂದಿಗಳಾದ ಭರತ್, ರಮೇಶ್ ಉಪಸ್ಥಿತರಿದ್ದರು.





