ಸೌತಡ್ಕ ಮಹಾಗಣಪತಿಗೆ ಮೂಡಪ್ಪ ಸೇವೆ ಸಂಪನ್ನ; 50 ಸಾವಿರಕ್ಕಿಂತ ಹೆಚ್ಚು ಭಕ್ತರ ದರ್ಶನ

ಶೇರ್ ಮಾಡಿ

ಕೊಕ್ಕಡ: ಇತಿಹಾಸ ಪ್ರಸಿದ್ಧ ಬಯಲು ಕೊಕ್ಕಡ ಸೌತಡ್ಕ ಆಲಯ ಗಣಪನಿಗೆ 108ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ ಭಕ್ತ ಮಹಾಜನರ ಸಹಕಾರದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108ಕಾಯಿ ಗಣಹೋಮ ಮತ್ತು ಮೂಡಪ್ಪ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಫೆ.2ರಂದು ಸಂಪನ್ನಗೊಂಡಿತು.

ಬೆಳಿಗ್ಗೆ 8 ರಿಂದ 108 ಕಾಯಿ ಗಣಹೋಮ ಮತ್ತು ಅಥರ್ವಶೀರ್ಷಾಭಿಷೇಕ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, 12.30ಕ್ಕೆ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಮೂಡಪ್ಪ ಸೇವೆ, ರಾತ್ರಿ 9ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ, ವಿಶೇಷವಾಗಿ ಸಿಡಿಮದ್ದು ಪ್ರದರ್ಶನ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8ರಿಂದ ಸಂಜೆ 5ರ ತನಕ ವಾಮನ್ ನಾಯಕ್ ಉಪ್ಪಿನಂಗಡಿ ಅವರ ನೇತೃತ್ವದಲ್ಲಿ ಆಸಕ್ತ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಸಂಜೆ 5ಗಂಟೆಯಿಂದ ಸುವರ್ಣ ನೃತ್ಯ ತಂಡ ಮಂಗಳೂರು ಇವರ ಸೇವಾರ್ಥ ಭರತನಾಟ್ಯ, 6ಗಂಟೆಯಿಂದ ಸೌತಡ್ಕ ಶಿಶುಮಂದಿರದ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ ನಡೆಯಿತು. ರಾತ್ರಿ 7 ಗಂಟೆಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು. ರಾತ್ರಿ 9.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ತುಳು ಪೌರಾಣಿಕ ಮತ್ತು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ಪ್ರದರ್ಶನಗೊಳ್ಳಲಿದೆ ನಡೆಯಿತು. ಆಡಳಿತ ಅಧಿಕಾರಿ ಹಾಗೂ ತಹಶೀಲ್ದಾರರು ಬೆಳ್ತಂಗಡಿ ಪೃಥ್ವಿ ಸಾನಿಕಂ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಮಲ್ಲಿಕಾ ಪಕಳ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಶಿವಾನಂದ ಮೇಗಿನಗುತ್ತು ಹಾಗೂ ಅರ್ಚಕರು, ಸಿಬ್ಬಂದಿ ವರ್ಗ, ಭಕ್ತ ವೃಂದದವರು ಉಪಸ್ಥಿತರಿದ್ದರು.

ಸನ್ಮಾನ:
ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಸುಮಾರು 30ವರ್ಷಗಳಿಂದ ಗುಮಾಸ್ತ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿರುವ ಕೇಶವ ಶಬರಾಯರವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು

ಮೂಡಪ್ಪ ಸೇವೆ ದಿನದಂದು 4500ಕ್ಕೂ ಹೆಚ್ಚು ಅವಲಕ್ಕಿ ಪಂಚಕಜ್ಜಾಯ, 4 ಕ್ವಿಂಟಲ್ ಅಪ್ಪಪ್ರಸಾದ, 10,000 ಹೆಚ್ಚು ಜನರಿಗೆ ಅನ್ನಪ್ರಸಾದ ವಿತರಣೆ ನಡೆಯಿತು. 50 ಸಾವಿರಕ್ಕಿಂತ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು. ಸುಮಾರು 20 ವರ್ಷಗಳಿಂದ ಬೆಂಗಳೂರು ಮೂಲದ ಕುಮಾರ್ ಎಂಬವರು ದೇವಸ್ಥಾನದ ಹೂವಿನ ವಿಶೇಷ ಅಲಂಕಾರವನ್ನು, ಬೆಂಗಳೂರು ಮೂಲದ ಕುಮಾರ್, ಹಾಸನ ಮೂಲದ ನಟರಾಜ್ ಎಂಬವರು ಅನ್ನದಾನಕ್ಕೆ ತರಕಾರಿಯ ವ್ಯವಸ್ಥೆಯನ್ನು ಮಾಡಿರುತ್ತಾರೆ.

  •  

Leave a Reply

error: Content is protected !!