ಜೇಸಿಐ ವಲಯ 15ರ ಉದಕ ಸಂಪಾದಕರಾಗಿ ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಆಯ್ಕೆ

ಶೇರ್ ಮಾಡಿ

ಉಪ್ಪಿನಂಗಡಿ: 2025ನೇ ಸಾಲಿನ ಜೇಸಿಐ ಭಾರತದ ವಲಯ 15ರ ಉದಕ ಪತ್ರಿಕೆಯ ಸಂಪಾದಕರಾಗಿ ಎರಡನೇ ಬಾರಿಗೆ ಉಪನ್ಯಾಸಕ ಜೇಸಿ ಮೋಹನ್ ಚಂದ್ರ ತೋಟದಮನೆ ಆಯ್ಕೆಯಾಗಿದ್ದಾರೆ.

ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವ ಅಧ್ಯಕ್ಷರಾಗಿದ್ದಾರೆ. ಇವರ ಜೇಸಿಐ ಚಟುವಟಿಕೆಗಳ ಗುರುತಿಸಿ, ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ವಲಯಾಧಿಕಾರಿಯಾಗಿ ನೀಡಿದ ಸೇವೆಯನ್ನು ಪರಿಗಣಿಸಿ ಅತ್ಯುತ್ತಮ ವಲಯ ಸಂಯೋಜಕ ಪ್ರಶಸ್ತಿ ಮತ್ತು ಜೇಸಿಐ ವಲಯ 15 ಕೊಡಮಾಡುವ ಸಾಧನಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರು ಉಪನ್ಯಾಸಕ ವೃತ್ತಿಯ ಜೊತೆಗೆ ಕಾರ್ಯಕ್ರಮ ನಿರೂಪಕರಾಗಿ, ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  •  

Leave a Reply

error: Content is protected !!