ನೆಲ್ಯಾಡಿ: ಹೊಸಮಜಲು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ರಮೇಶ್ ಬಾಣಜಾಲು ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ ಸಮೀಪದ ಹೊಸಮಜಲು ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆಯು ಕೌಕ್ರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಉದಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ಫೆ.8ರಂದು ನಡೆಯಿತು.

ನೂತನ ಅಧ್ಯಕ್ಷರಾಗಿ ರಮೇಶ್ ಬಾಣಜಾಲು, ಉಪಾಧ್ಯಕ್ಷರಾಗಿ ಅಝೀಝ್, ಸದಸ್ಯರಾಗಿ ಸವಿತಾ, ಗಣೇಶ್ ಕುಮಾರ್, ನಳಿನಿ, ನೆಬಿಸ್ಸಾ, ರುಕ್ಯಾ, ಮುಬೀನಾ, ಸೈರಿಯಾ, ಆದಿದಾ, ಝರಾ, ಅಬ್ದುಲ್ ಅಝೀಝ್, ಅಸ್ಮ, ಸಾಜಿದಾ, ಝುಬೈದಾ, ಜಮೀಳಾ, ಧನಂಜಯ, ಜೈನಾಬಿ ಇವರುಗಳು ಆಯ್ಕೆಯಾದರು.

ದೈಹಿಕ ಶಿಕ್ಷಣ ಶಿಕ್ಷಕ ಆನಂದ ಗೌಡ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪ್ರೇಮ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪ.ವಿ ಪೋಷಕರ ಪಟ್ಟಿಯನ್ನು ವಾಚಿಸಿದರು. ಸರಿತಾ ಬಿ. ಎಸ್ ವಂದಿಸಿದರು.

ಸಭೆಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿನ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಬಾಣಜಾಲು, ಎಸ್‌ಡಿಎಂಸಿ ನ ಮಾಜಿ ಅಧ್ಯಕ್ಷರಾದ ಕೆ.ಇ. ಅಬೂಬಕ್ಕರ್, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

  •  

Leave a Reply

error: Content is protected !!